ಹಿರಿಯಡ್ಕ : ಸಾಲಗಾರರ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆ
ಉಡುಪಿ: ಬೆಂಗಳೂರಿನಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸಿಕೊಂಡಿದ್ದ ಯುವಕ ಸಾಲಗಾರರ ಒತ್ತಡದಿಂದ ಬೇಸತ್ತು ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಯುವಕನನ್ನು ಹಿರಿಯಡ್ಕ ಬೊಮ್ಮರಬೆಟ್ಟು ನಿವಾಸಿ ಆಶಿಶ್ (30) ಎಂದು ಗುರುತಿಸಲಾಗಿದೆ.
ಮೃತ ಯುವಕ ಆಶಿಶ್ ಬೆಂಗಳೂರಿನಲ್ಲಿ TAS Security Service ಎಂಬ ಏಜೆನ್ಸಿ ನಡೆಸಿಕೊಂಡಿರುವುದಾಗಿದೆ. ಅವರು ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದು, ಈ ಬಗ್ಗೆ ಸಾಲ ನೀಡಿದವರು ಆಗಾಗ ಕರೆ ಮಾಡಿ & ಭೇಟಿ ಮಾಡಿ ಸಾಲ ತೀರಿಸುವಂತೆ ಹೇಳುತ್ತಿದ್ದರು. ಆಶಿಶ್ ನು ತನ್ನ ಸಂಸಾರದೊಂದಿಗೆ 6 ತಿಂಗಳ ಹಿಂದೆ ಊರಿಗೆ ಬಂದಿದ್ದು, ಆಗಲೂ ಸಾಲ ನೀಡಿದವರು ಸಾಲ ಕಟ್ಟುವಂತೆ ಕರೆ ಮಾಡಿ ಹೇಳುತ್ತಿದ್ದು, ಆಶಿಶನು ಸಾಲ ತೀರಿಸಲಾಗದೇ ಮಾನಸಿಕವಾಗಿ ನೊಂದುಕೊಂಡು ನಾವು ಸಾಯುವುದೇ ಒಳ್ಳೆಯದು ಎಂದು ಮನೆಯವರಲ್ಲಿ ಹೇಳುತ್ತಿದ್ದರು ಎನ್ನಲಾಗಿದೆ,
ಈ ವಿಚಾರದಲ್ಲಿ ಮಾನಸಿಕವಾಗಿ ನೊಂದಿದ್ದ ಆಶಿಶ್ ಶುಕ್ರವಾರ ಬೆಳಗ್ಗೆ ಬೊಮ್ಮಾರಬೆಟ್ಟು ಗ್ರಾಮದ ಬಸ್ತಿಯಲ್ಲಿರುವ ತನ್ನ ಮನೆಯ ಮಲಗುವ ಕೋಣೆಯ ಸೀಲಿಂಗ್ ಫ್ಯಾನ್ ಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













