ಕುಂದಾಪುರ: ರೋಟರ್ಯಾಕ್ಟ್ ಕ್ಲಬ್ ಶಿಕ್ಷಕರ ದಿನಾಚರಣೆ

 

ಕುಂದಾಪುರ: ಬದುಕಿನುದ್ದಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ದುಡಿದವನು ನಾನು, ಹಾಗಾಗಿ ನಾಡಿನ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆಯೇ ಸನ್ಮಾನಿಸುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ. ಸನ್ಮಾನ ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ವೆಂಕಟರಮಣ ಪಿಯು ಕಾಲೇಜು ಪ್ರಾಂಶುಪಾಲ ಗಣೇಶ್ ನಾಯಕ್ ಹೇಳಿದರು. ರೋಟರ್ಯಾಕ್ಟ್ ಕ್ಲಬ್ ಕುಂದಾಪುರ ಶಿಕ್ಷಕರಿಗಾಗಿ ಅಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವೆಂಕಟರಮಣ ಪಿಯು ಕಾಲೇಜಿನಲ್ಲಿ ಸೇವೆ ಸಲ್ಲಿಸಿದ 13ಶಿಕ್ಷಕರನ್ನು ಸನ್ಮಾನಿಸಲಾಯಿತು.

teachersday kundapur

ಕಾಲೇಜಿನ ಆಡಳಿತಾಧಿಕಾರಿ ಶ್ರೀಪತಿ ಹೇರ್ಳೇ, ಕಾಲೇಜಿನ ಕಾರ್ಯದರ್ಶಿ ರಾಧಾಕೃಷ್ಣ ಶೆಣೈ, ಗಣಿತ ಉಪನ್ಯಾಸಕ ಎನ್.ಎಸ್.ಅಡಿಗ, ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಎಚ್.ಎಸ್.ಹತ್ವಾರ್, ರೋಟರ್ಯಾಕ್ಟ್ ಕ್ಲಬ್ ಮಾಜಿ ಅಧ್ಯಕ್ಷರಾದ ಹುಸೇನ್ ಹೈಕಾಡಿ, ಉಪಾಧ್ಯಕ್ಷರಾದ ಮಂಜುನಾಥ ಕಾಮತ್ ಉಪಸ್ಥಿತರಿದ್ದರು.

ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಕೆಸಿ ಸ್ವಾಗತಿಸಿದರು. ಕಾರ್ಯದರ್ಶಿ ಹರ್ಷ ಶೇಟ್ ಸನ್ಮಾನಿತರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷರಾದ ಮಂಜುನಾಥ ಕಾಮತ್ ವಂಡ್ಸೆ, ಕುಂದಾಪುರ ಡಾಟ್ ಕಾಮ್ ಸ್ಥಾಪಕರಾದ ವಿ. ಗೌತಮ್ ನಾವಡ ನಿರೂಪಿಸಿದರು.

ಸನ್ಮಾನಿತ ಶಿಕ್ಷಕರು

ಸುಜಯ, ದೀಪಿಕ, ಎಂ.ಎಸ್.ಅಡಿಗ, ಲತಾ ಪೈ, ಸವಿತಾ ರಮೇಶ್, ಮಮತಾ ಪಿ, ವಿಕ್ಷಿತಾ ಕೆ, ಶೃತಿ, ರೇಷ್ಮಾ, ಸಂದೀಪ್. ಅಕ್ಷತಾ, ಸುಕನ್ಯಾ ಭಟ್, ಗಣೇಶ್ ನಾಯಕ್.

Leave a Reply