ಕುಂದಾಪುರ: ಸುಷ್ಮಾ ಸ್ವರಾಜ್, ವಸುಂದರಾ ರಾಜೆ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಕುಂದಾಪುರ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಾವಿರಾರು ಕೋಟಿ ಐಪಿಎಲ್ ಹಗರಣದ ವಂಚಕ ಲಲಿತ್ ಮೋದಿಗೆ ದೇಶದ ಕಾನೂನಿಗೆ ವಿರುದ್ಧವಾಗಿ ಬೆಂಬಲ ನೀಡುತ್ತಿರುವ ಕೇಂದ್ರದ ಮೋದಿ ಸರಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ವಸುಂದರಾ ರಾಜೆಯವರು ರಾಜೀನಾಮೆ ನೀಡಬೇಕು ಇಲ್ಲವೇ ಪ್ರಧಾನಿ ಮೋದಿಯವರು ಅವರಿಬ್ಬರನ್ನು ಪದವಿಯಿಂದ ವಜಾಗೊಳಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಆಗ್ರಹಿಸಿದರು.

cong

ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ದೀಪಕ್ ನಾವುಂದ, ರಾಜ್ಯ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾರಾಯಣ ಆಚಾರ್, ಕೆ. ಶಿವಾನಂದ, ಕುಂದಾಪುರ ವಿಧಾನಸಭಾ ಕ್ಷೇತ್ರ ಐಟಿ ಸೆಲ್ ಪ್ರಮುಖರಾದ ಶ್ರೀಧರ್ ಆಚಾರ್, ಪ್ರತೀಕ್ ಶೆಟ್ಟಿ, ಸುನಿಲ್ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ್ ಖಾರ್ವಿ, ಶಿವರಾಮ ಪುತ್ರನ್, ಶ್ರೀಧರ್ ಶೇರೆಗಾರ್, ಉಮೇಶ್ ಬಿ., ಪ್ರಮುಖರಾದ ವಕ್ವಾಡಿ ರಮೇಶ್ ಶೆಟ್ಟಿ, ಲಾಯ್ ಕರ್ವೆಲ್ಲೊ, ಕುಮಾರ್ ಖಾರ್ವಿ ಮದ್ದುಗುಡ್ಡೆ, ನರಸಿಂಹ ದೇವಾಡಿಗ, ಕೆ. ಸುರೇಶ್, ಧರ್ಮಪ್ರಕಾಶ್, ರಾಜಶೇಖರ್ ಶೆಟ್ಟಿ, ರಂಗನಾಥ ಬಟ್ಟ, ಅಬ್ದುಲ್ಲಾ ಕೋಡಿ, ಆನಂದ ಸಾರಂಗ, ಆಶಾ ಕರ್ವೆಲ್ಲೊ, ಶೋಭಾ ಸಚ್ಚಿದಾನಂದ, ದಿನೇಶ್ ಖಾರ್ವಿ, ಬಾಬು ಪೂಜಾರಿ ಕೋಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here