ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಗೆ ಅಭಿನಂದನೆಗಳು : ಜಯಪ್ರಕಾಶ ಹೆಗ್ಡೆ

ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಗೆ ಅಭಿನಂದನೆಗಳು : ಜಯಪ್ರಕಾಶ ಹೆಗ್ಡೆ

ಉಡುಪಿ: ಇತ್ತೀಚೆಗಷ್ಟೆ ದೇಶದ ಗಡಿಯೊಳಗೆ ನುಗ್ಗಿ ಜಮ್ಮು-ಕಾಶ್ಮೀರದ ಉರಿ ಸೇನಾ ನೆಲಯ ಮೇಲೆ ದಾಳಿ ನಡೆಸಿ ಭಾರತದ 18 ಯೋದರ ಸಾವಿಗೆ ಕಾರಣರಾಗಿರುವ ಪಾಕಿಸ್ತಾನಿ ಉಗ್ರಗಾಮಿಗಳ ಶಿಬಿರಗಳನ್ನು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ನಾಶ ಪಡಿಸುವ ಮೂಲಕ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆಗೆ ಮತ್ತು ಈ ಕಾರ್ಯಚರಣೆಯ ನಾಯಕತ್ವ ವಹಿಸಿದ ಸೇನಾ ಕಾರ್ಯಚರಣೆಗಳ ಡೈರೆಕ್ಟರ್ ಜನರಲ್ ಲೇ| ಜ| ರಣಬೀರ್ ಸಿಂಗ್‍ರವರಿಗೆ ಮತ್ತು ಈ ಕುರಿತು ದಿಟ್ಟ ನಿರ್ಧಾರ ಕೈಗೊಂಡ ಕೇಂದ್ರ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಇನ್ನಾದರೂ ಸದಾ ಜಗಳಕಾಯುವ ಪಾಕಿಸ್ತಾನ ತನ್ನ ಉಗ್ರ ಚಟುವಟಿಕೆಗಳನ್ನು ಕೊನೆಗೊಳಿಸಿ ನೆರೆರಾಷ್ಟ್ರದಾದ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವಂತಾಗಲಿ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಮತ್ತು ಉಡುಪಿ ಜಿಲ್ಲಾ ಜನಪರ ಪ್ರಗತಿಪರ ವೇದಿಕೆಯ ಮುಖಂಡರಾದ ಮಾಣಿ ಗೋಪಾಲ್, ಬಿರ್ತಿ ರಾಜೇಶ್ ಶೆಟ್ಟಿ ಹಾಗು ಕರ್ನಾಟಕ ವಿದ್ಯಾರ್ಥಿ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಥ್ವಿರಾಜ್ ಶೆಟ್ಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply