ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ ಬೈಂದೂರು ಪೊಲೀಸರು

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ ಬೈಂದೂರು ಪೊಲೀಸರು

ಬೈಂದೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿ ಖಾನೆಗೆ ಕೊಂಡೊಯ್ಯುತ್ತಿದ್ದ ವೇಳೆ ಅವುಗಳನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ಬೈಂದೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೊದಲ ಪ್ರಕರಣದಲ್ಲಿ ಆಗಸ್ಟ್ 11ರಂದು ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ ಎನ್ ಅವರು   ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಒತ್ತಿನೆಣೆ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 9:30 ಗಂಟೆಗೆ ಬಾತ್ಮೀದಾರರು ಕರೆ ಮಾಡಿ ಶಿರೂರು ಮಾರ್ಕೇಟ್ ಕಡೆಯಿಂದ ಟಾಟಾ ಏಸ್ ವಾಹನದಲ್ಲಿ ಅಕ್ರಮವಾಗಿ ಹಿಂದುಗಡೆ ಮೂರು ಗುಡ್ಡಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಬೈಂದೂರು ಕಡೆಗೆ ಹೋಗುತ್ತಿರುವುದಾಗಿ ನೀಡಿದ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಕೋಣ್ಮಕ್ಕಿ ಕ್ರಾಸ್ ತಲುಪಿದಾಗ ಬಾತ್ಮೀದಾರು ಪುನಃ ಕರೆ ಮಾಡಿ ಸದ್ರಿ ಟಾಟಾ ಏಸ್ ವಾಹನವು ಕೋಣ್ಮಕ್ಕಿ ಕಡೆಗೆ ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದು ಇಲಾಖಾ ಜೀಪನ್ನು ಕೋಣ್ಮಕ್ಕಿ ಕಡೆಗೆ ಚಲಾಯಿಸಿದಾಗ 10:00 ಗಂಟೆಯ ಸುಮಾರಿಗೆ ಇಲಾಖಾ ಜೀಪನ್ನು ನೋಡಿದ ಟಾಟಾ ಏಸ್ ಚಾಲಕನು ವಾಹನವನ್ನು ಸ್ವಲ್ಪ ದೂರ ಚಲಾಯಿಸಿ ಟಾಟಾ ಏಸ್ ವಾಹನವನ್ನು ಕೋಣ್ಮಕ್ಕಿ ರಸ್ತೆಯಲ್ಲಿಯೇ ನಿಲ್ಲಿಸಿ ಅದರಲ್ಲಿದ್ದ ಚಾಲಕ ಕತ್ತಲೆಯಲ್ಲಿ ಓಡಿ ಪರಾರಿ ಆಗಿರುತ್ತಾರೆ.

ನಂತರ ಟಾಟಾ ಏಸ್ ನ್ನು ಪರಿಶೀಲಿಸಲಾಗಿ MEGA XL ಮಾದರಿಯದ್ದಾಗಿದ್ದು ಅದರ ನಂಬ್ರ ಕೆಎ-20-ಎಎ-7094 ಆಗಿದ್ದು, ಅದರ ಹಿಂಬದಿಯನ್ನು ಪರಿಶೀಲಿಸಿದಾಗ ಹಿಂಬದಿಯಲ್ಲಿ 3 ಕಪ್ಪು ಬಣ್ಣದ ಗುಡ್ಡಗಳು ಕಂಡು ಬಂದಿದ್ದು ಅವುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕವಾಗಿ ವಾಹನಕ್ಕೆ ತುಂಬಿಸಿರುವುದು ಕಂಡು ಬಂದಿರುತ್ತದೆ.

ಸದ್ರಿ ಗುಡ್ಡ (ಗಂಡು ಕರು) ಗಳ ಅಂದಾಜು ಮೌಲ್ಯ 15,000/- ರೂಪಾಯಿ ಆಗಿದ್ದು ಸಾಗಾಟಕ್ಕೆ ಬಳಸಿದ ಟಾಟಾ ಏಸ್ ವಾಹನ ಅಂದಾಜು ಮೌಲ್ಯ 4,00,000/- ರೂಪಾಯಿ ಆಗಿದ್ದು ಸ್ವಾಧೀನಪಡಿಸಿದ ಸ್ವತ್ತುಗಳ ಒಟ್ಟು ಮೌಲ್ಯ 4,15,000/-ರೂ ಆಗಬಹುದು.

ಆರೋಪಿತನು ಜಾನುವಾರುಗಳನ್ನು ಎಲ್ಲಿಯೋ ಕಳವು ಮಾಡಿ ಸಾಗಾಟ ಮಾಡುವರೇ ಯಾವುದೇ ಪರವಾನಿಗೆ ಇಲ್ಲದೇ ಅವುಗಳಿಗೆ ಯಾವುದೇ ಮೇವು, ಬಾಯಾರಿಕೆ ನೀಡದೇ, ಹಿಂಸೆಯಿಂದ ಉಸಿರುಗಟ್ಟುವ ರೀತಿಯಲ್ಲಿ ತುಂಬಿಸಿಕೊಂಡು ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡನೇ ಪ್ರಕರಣದಲ್ಲಿ ಬೈಂದೂರು ಪಿಎಸ್ ಐ ತಿಮ್ಮೇಶ್ ಅವರು ರಾತ್ರಿ ವಿಶ್ರಾಂತಿಯಲ್ಲಿರುವಾಗ ಬಾತ್ಮಿದಾರರೊಬ್ಬರು ಕರೆಮಾಡಿ ಶಿರೂರು ತೂದಳ್ಳಿ ಉದೂರು ಜಂಕ್ಷನ್  ಬಳಿ ಒಂದು ಸಿಲ್ವರ್ ಬಣ್ಣದ ಅಪರಿಚಿತ ವಾಹನ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದಾಗಿ ದೂರವಾಣಿ ಮುಖೇನ ಮಾಹಿತಿ ತಿಳಿಸಿದ ಮೇರೆಗೆ ಠಾಣಾಧಿಕಾರಿಗಳು  ಇಲಾಖಾ ಜೀಪಿನಲ್ಲಿ, ಜೀಪು ಚಾಲಕ ಶ್ರೀನಿವಾಸ್ ಹಾಗೂ ಶಿರೂರು, ಕೆಳಪೇಟೆ ಗಸ್ತಿನಲ್ಲಿರುವ ಹುಸೆನಸಾಬ ಹೋಮ್ ಗಾರ್ಡ್ ನವರೊಂದಿಗೆ ಸದ್ರಿ ಮಾರ್ಗದಲ್ಲಿ ರೌಂಡ್ಸ ಮಾಡುತ್ತಿರುವಾಗ ಉದೂರು ಜಂಕ್ಷನ್ ಬಳಿ ಒಂದು ಅಪರಿಚಿತ ವಾಹನವನ್ನು ತಡೆದು ನಿಲ್ಲಿಸಿ ಪರೀಶಿಲಿಸಲಾಗಿ ಗಾಡಿ ನಂಬ್ರ ಕೆಎ-02-ಡಿ-7184  ಆಗಿದ್ದು ಅದರಲ್ಲಿ ಹಗ್ಗ ದೊಣ್ಣೆಗಳಿದ್ದು ಈ ಬಗ್ಗೆ ವಾಹನದಲ್ಲಿದ್ದವರನ್ನು ಕೂಲಂಕುಶವಾಗಿ ವಿಚಾರಿಸಲಾಗಿ ರಸ್ತೆ ಬದಿಯಲ್ಲಿದ್ದು ಬಿಡಾಡಿ ದನಗಳನ್ನು ಕಳವು ಮಾಡಲು ಬಂದಿರುವುದಾಗಿ ತಪ್ಪೋಪ್ಪಿಕೊಂಡಿದ್ದು ಆರೋಪಿಗಳಣ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಿರೂರು ನಿವಾಸಿ ಮೊಹಮ್ಮದ ಮುಬೀನ್ (29), ಯುನೂಸ್ ಮುಗುಡಿ (29) ಮೊಹಮ್ಮದ ಅರ್ಫಾತ್ (25), ಶೇಖ್ ಮೊಹಮ್ಮದ ಅಲ್ತಾಫ್ (30), ಮೌಲಾನಾ ಖಾಸಿಂ (29) , ಶಬಾಜ್ ಮೊಹಮ್ಮದ ಹನೀಫ್ (22)   ಗುರುತಿಸಲಾಗಿದ್ದು, ಬಂಧಿತರಿಂದ  ಕಳ್ಳತನ ಮಾಡಲು ಬಳಸಿದ ಕಾರು ನಂಬ್ರ ಕೆಎ-02 ಡಿ-7184 ಸಿಲ್ವರ್ ಬಣ್ಣದ ಟವೇರ ಕಾರು ಮೌಲ್ಯ ಸುಮಾರು 2.00.000 ರೂಪಾಯಿ, 1 ಹುರಿಹಗ್ಗ ಹಾಗೂ ದೊಣ್ಣೇಯನ್ನು  ಕತ್ತಿಯನ್ನು  ಸಮಕ್ಷಮ ಸ್ವಾಧೀನ ಪಡಿಸಿಕೊಂಡಿದ್ದಾರೆ.