ಅಕ್ರಮ ಗೋಸಾಗಾಟ: ಪುತ್ತೂರು ಪೊಲೀಸರಿಂದ ಇಬ್ಬರ ಬಂಧನ

Spread the love

ಅಕ್ರಮ ಗೋಸಾಗಾಟ: ಪುತ್ತೂರು ಪೊಲೀಸರಿಂದ ಇಬ್ಬರ ಬಂಧನ

ಪುತ್ತೂರು: ಪಾಣಾಜೆ ನಿವಾಸಿ ಪ್ರೇಮ್ರಾಜ್ ಅವರ ದೂರಿನ ಮೇರೆಗೆ ನಡುರಸ್ತೆಯಲ್ಲಿ ಬಿಟ್ಟುಹೋಗಲಾದ ಗೋವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.29 ರಂದು ಬೆಳಿಗ್ಗೆ, ಯಾರೋ ಕಳ್ಳರು ಗೋವುಗಳನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿರುವ ವೇಳೆ, ವಾಹನ ದುರಸ್ತಿಗೀಡಾಗಿ ಪುತ್ತೂರು ನರಿಮೊಗರು ಪ್ರದೇಶದಲ್ಲಿ ನಡುರಸ್ತೆಯಲ್ಲೇ ಗೋವುಗಳನ್ನು ಬಿಟ್ಟು ಪರಾರಿಯಾದಿದ್ದಾರೆ. ಸ್ಥಳೀಯರ ಸಹಕಾರದಿಂದ ಪಿರ್ಯಾದುದಾರ ಪ್ರೇಮ್ರಾಜ್ ಅವರು ಗೋವುಗಳನ್ನು ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ್ದಾರೆ. ಗೋವುಗಳನ್ನು ಕಳವು ಮಾಡಿ ಸಾಗಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅವರು ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತನಿಖೆಯಲ್ಲಿ, ಉಳ್ಳಾಲ ಸಜಿಪನಡು ನಿವಾಸಿಗಳಾದ ಆಶಿಕ್ ಪಾಷಾ (26) ಹಾಗೂ ಅಬ್ದುಲ್ ಲತೀಫ್ (25) ಅವರು ಕೆಎ 52 4889 ನೋಂದಣಿಯ ಇನ್ನೋವಾ ಕಾರಿನಲ್ಲಿ 4 ಕರುಗಳು ಮತ್ತು 1 ದನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ವಾಹನ ದುರಸ್ತಿಗೀಡಾಗಿದ್ದು, ಜಾನುವಾರುಗಳನ್ನು ರಸ್ತೆಯಲ್ಲಿ ಬಿಟ್ಟು ವಾಹನದೊಂದಿಗೆ ತೆರಳಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಜಾನುವಾರುಗಳನ್ನು ಸಾಗಿಸಲು ಬಳಸಿದ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments