ಅತ್ಯಾಚಾರ, ಕೊಲೆ ಆರೋಪಿ ಪೋಲಿಸ್ ಕಸ್ಟಡಿಯಿಂದ ಪರಾರಿ

ಅತ್ಯಾಚಾರ, ಕೊಲೆ ಆರೋಪಿ ಪೋಲಿಸ್ ಕಸ್ಟಡಿಯಿಂದ ಪರಾರಿ

ಉಡುಪಿ : ಮೂಡುಸಗ್ರಿ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಬಾದಾಮಿ ತಾಲೂಕಿನ ಹನುಮಂತ ಬಸಪ್ಪಕಂಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಾಸು ಹಿರಿಯಡ್ಕ ಕಾರಾಗೃಹಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಪೊಲೀಸರಿಂದ ಪರಾರಿಯಾಗಿರುವ ಘಟನೆ ಭಾನುವಾರ ಸಂಜೆ ವೇಳೆ ನಡೆದಿದೆ.

ಬಂಧನಕ್ಕೆ ಒಳಗಾದ ಹುನುಮಂತನನ್ನು ಪೊಲೀಸರು ರವಿವಾರ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರ ಶೇಖರ್ ಎಂ.ಜೋಶಿ ಅವರ ನಿವಾಸದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರು.

ಅದರಂತೆ ಪೊಲೀಸರು ಆತನನ್ನು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಅದಕ್ಕಾಗಿ ಕಾರ್ಯಪ್ರವೃತರಾಗಿರುವ ಪೊಲೀಸರು ಆತನಿಗೆ ಹುಡುಕುವ ಕಾರ್ಯ ನಡೆಸು ತ್ತಿದ್ದಾರೆ.

Notify of
Riya

What police were doing I think they only supported him to run. He alone and police team with the weapons…if the police can’t run and catch him means how are these police selected for the job……really shit.