ಅದ್ದೂರಿಯಾಗಿ ಜರುಗಿದ ಪುತ್ತಿಗೆ ಸ್ವಾಮೀಜಿಗಳ ಪುರಪ್ರವೇಶ

Spread the love

ಅದ್ದೂರಿಯಾಗಿ ಜರುಗಿದ ಪುತ್ತಿಗೆ ಸ್ವಾಮೀಜಿಗಳ ಪುರಪ್ರವೇಶ

ನಾಲ್ಕನೇ ಬಾರಿಗೆ ಶ್ರೀ ಕೃಷ್ಣ ಮಠದ ಸರ್ವಜ್ಞ ಪೀಠವನ್ನೇರಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥರ ಪುರಪ್ರವೇಶ ಅದ್ದೂರಿಯಾಗಿ ಸೋಮವಾರ ಜರುಗಿತು.

ಜೋಡುಕಟ್ಟೆಯಲ್ಲಿ ಯತಿದ್ವಯರು ದೇವರಿಗೆ ಪೂಜೆಯನ್ನು ನೆರವೇರಿಸಿ ಗಣ್ಯರ ಸಮ್ಮುಖದಲ್ಲಿ ಮೆರವಣಿಗೆಯನ್ನು ವೀಕ್ಷಿಸಿದರು. ಅನಂತರ ದೇವರ ಚಿನ್ನದ ಪಲ್ಲಕ್ಕಿಯ ಮುಂದೆ ಸಾಗಿದ್ದು, ಅದರ ಹಿಂದೆ ವಿಶೇಷ ಸಿಂಗಾರದ ರಥದಲ್ಲಿ ಇಬ್ಬರೂ ಶ್ರೀಗಳನ್ನು ಕುಳ್ಳಿರಿಸಿ ಶ್ರೀ ಕೃಷ್ಣ ಮಠದತ್ತ ಕರೆದೊಯ್ಯಲಾಯಿತು.

ವಿವಿಧೆಡೆಗೆಳ ಆಕರ್ಷಕ ಕಲಾತಂಡಗಳು, ವಿವಿಧ ಚಂಡೆ ಬಳಗ, ಭಜನಾ ಮಂಡಳಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ಸಾಗಿ ಡಯಾನಾ ಸರ್ಕಲ್, ಕೆಎಂ ಮಾರ್ಗ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ಸಾಗಿತು.

ಕಾರ್ಯ್ಕರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಯಶಪಾಲ್ ಸುವರ್ಣ, ಮಾಜಿ ಶಾಸಕರಾದ ಕೆ ರಘುಪತಿ ಭಟ್, ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ನಗರಸಭೆಯ ಆಯುಕ್ತರಾದ ರಾಯಪ್ಪ, ಗಣ್ಯರಾದ ಪ್ರಸಾದ್ ರಾಜ್ ಕಾಂಚನ್, ಕಿಶನ್ ಹೆಗ್ಡೆ, ಪ್ರದೀಪ್ ಕುಮಾರ್ ಕಲ್ಕೂರ್, ಡಾ. ಹೆಚ್ ಎಸ್ ಬಲ್ಲಾಳ್, ಭುವನೇಂದ್ರ ಕಿದಿಯೂರು, ಇಂದ್ರಾಳಿ ಜಯಕರ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

ಕಿನ್ನಿಮೂಲ್ಕಿಯಿಂದ ಶ್ರೀ ಕೃಷ್ಣ ಮಠದವರೆಗೆ ಮೆರವಣಿಗೆ ಸಾಗಿದ ವೇಳೆ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ರಸ್ತೆಯ ಎರಡೂ ಅಂಚಲ್ಲಿ ಶಾಲಾ ಮಕ್ಕಳು, ನಾಗರಿಗರು ಸಹಿತ ಸಾವಿರಾರು ಮಂದಿ ಮೆರವಣಿಗೆಯನ್ನು ವೀಕ್ಷಿಸಿದರು.

ಎದ್ದು ಕಂಡ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ

ಪ್ರತಿ ಪುರಪ್ರವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುವುದು ವಾಡಿಕೆಯಾಗಿದ್ದು ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರ್ಯಾಯ ಕಾರ್ಯಕ್ರಮದ ಒಂದು ಸಭೆಯಲ್ಲಿ ಭಾಗವಹಿಸಿದ್ದು ಬಿಟ್ಟರೆ, ಪುರಪ್ರವೇಶ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸದೆ ದೂರ ಉಳಿದಿದ್ದಾರೆ.


Spread the love