ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮಸೀದಿಯ ಮೌಲವಿ ವಿರುದ್ದ ಪೊಕ್ಸೊ ಪ್ರಕರಣ ದಾಖಲು

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮಸೀದಿಯ ಮೌಲವಿ ವಿರುದ್ದ ಪೊಕ್ಸೊ ಪ್ರಕರಣ ದಾಖಲು

ಮಂಗಳೂರು: ಅಪ್ರಾಪ್ತ ಬಾಲಕನ ಮೇಲೆ ಮಸೀದಿಯ ಮೌಲವಿಯವರು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಪುತ್ತೂರಿನ ನರಿಮೊಗರುವಿನಲ್ಲಿ ನಡೆದಿದೆ.

ಮಾರ್ಚ್ 21 ರಂದು ಧರ್ಮದ ಪದ್ದತಿಯಂತೆ ಮಸೀದಿಯ ಗುರುಗಳಾದ ಉಸ್ತಾದ್ ರವರಿಗೆ ಸಂಜೆಯ ಚಹ-ತಿಂಡಿಯನ್ನು ನೆರೆಯ ಹಾರೂನ್ ರವರು ಕೊಟ್ಟು ಕಳುಹಿಸಿದ್ದನ್ನು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಹಿಮಾಯುತುಲ್ ಇಸ್ಲಾಂ ಮದರಸದಲ್ಲಿದ್ದ ಅನ್ವರ್ ಮೌಲವಿ ರವರಿಗೆ ಅಪ್ರಾಪ್ತ ಬಾಲಕನು ಸಂಜೆ ಸುಮಾರು 5:00 ಗಂಟೆಗೆ ಕೊಂಡು ಹೋಗಿ ಕೊಟ್ಟ ಸಮಯ ಅನ್ವರ್ ಮೌಲವಿ ರವರು ಮದರಸದ ಬಾಗಿಲನ್ನು ಹಾಕಿ ಅಸಹಜ ಲೈಂಗಿಕ ದೌರ್ಜನ್ಯವನ್ನು ಎಸಗಿರುವುದಲ್ಲದೇ, ಆರೋಪಿಯಾದ ಅನ್ವರ್ ಮೌಲವಿಯು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದಲ್ಲದೆ , ನಂತರ ಆರೋಪಿತನು ಎಪ್ರೀಲ್ 7 ರಂದು ಮದರಸ ಶಾಲೆ ಬಿಟ್ಟ ಬಳಿಕ ಪಿರ್ಯಾದಿಯನ್ನು ಮದರಸದಿಂದ ಹೊರಗಡೆ ಹೋಗದಂತೆ ಬಾಗಿಲು ಹಾಕಿ ಮತ್ತೊಮ್ಮೆ ಅಸಹಜ ಲೈಂಗಿಕ ದೌರ್ಜನ್ಯವನ್ನು ಎಸಗಿರುವುದಲ್ಲದೇ ಬೆದರಿಕೆ ಹಾಕಿರುವುದಾಗಿದೆ.

ಇದರಿಂದ ಮಾನಸಿಕವಾಗಿ ನೊಂದಿದ್ದು ಮದರಸಕ್ಕೆ ಹಾಗೂ ಮಸೀದಿಗೆ ನಮಾಝ್ಗೆ ಹೋಗದೇ ಇದ್ದುದನ್ನು ಕಂಡು ನಿನ್ನೆ ದಿನ ತಾಯಿಯಾದ ತಾಹಿರಾ ರವರು ಪಿರ್ಯಾದಿಯನ್ನು ವಿಚಾರಿಸಿದಾಗ ವಿಚಾರವನ್ನು ಬಾಲಕನು ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪುತ್ತೂರು ಮಹಿಳಾ ಠಾಣೆಯಲ್ಲಿ ಮೌಲವಿ ವಿರುದ್ದ ಪೊಕ್ಸೊ ಪ್ರಕರಣ ದಾಖಲಾಗಿದೆ.