ಆಳ್ವಾಸ್‍ನಲ್ಲಿ ನೂತನ ಎಂಬಿಎ ಬ್ಯಾಚ್ ಉದ್ಘಾಟನೆ

ಆಳ್ವಾಸ್‍ನಲ್ಲಿ ನೂತನ ಎಂಬಿಎ ಬ್ಯಾಚ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 2019-2021 ಎಂಬಿಎ ಬ್ಯಾಚ್ ನ ಉದ್ಘಾಟನೆ ಸೆಮಿನಾರ್ ಹಾಲ್ ನಲ್ಲಿ ನಡೆಯಿತು.

ಕಾಲೇಜಿನ ಹಳೆ ವಿದ್ಯಾರ್ಥಿ ರಿನು ಥೋಮಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧನೆಯ ಹಾದಿಯಲ್ಲಿ ಹಲವಾರು ಸಂಕಷ್ಟ ಎದುರಾಗುತ್ತದೆ. ಶ್ರದ್ದೆ ಮತ್ತು ಪರಿಶ್ರಮದಿಂದ ಸಾಧಿಸಬಹುದು. ನನ್ನ ವೈಯಕ್ತಿಕ ಬೆಳವಣಿಗೆ ಆಳ್ವಾಸ್ ಕಾಲೇಜಿನ ಕೊಡುಗೆ ಅನನ್ಯವಾದದ್ದು. ಸಹಕಾರ, ಉಪನ್ಯಾಸಕರ ಬೆಂಬಲ, ತರಬೇತಿ ಇವೆಲ್ಲವು ನನಗೆ ವಿಟಿಯುನಲ್ಲಿ 2 ನೇ ರ್ಯಾಂಕ್ ಪಡೆಯಲು ಸಾಧ್ಯವಾಯಿತು ಎಂದರು.

ಮೆನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವ ಪ್ಲೆಸ್ ಮೆಂಟ್ ತರಬೇತಿ ಮತ್ತು ಕ್ಯಾಂಪಸ್ ಡ್ರೈವ್‍ನ ಸಕ್ರೀಯವಾಗಿ ಭಾಗವಹಿಸಿ ಎಂದರು

2016 ಮತ್ತು 2018 ದ ಬ್ಯಾಚಿನಲ್ಲಿ ವಿ.ಟಿ.ಯುನಲ್ಲಿ ಎಮ್. ಬಿ.ಎ ವಿಭಾಗದಲ್ಲಿ 2 ನೇ ರ್ಯಾಂಕ್ ಪಡೆದ ರಿನು ಥೋಮಸ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರಿನ ಎಸ್‍ಡಿಎಂ ಪಿಜಿ ಸೆಂಟರ್ ಫಾರ್ ಬ್ಯುಸಿನೆನ್ ಮೆನೇಜ್ಮೆಂಟ್ ಅಂಡ್ ರಿಸರ್ಚ್ ಸಂಸ್ಥಾಪಕ ನಿರ್ದೇಶಕ ಡಾ. ದೇವರಾಜ್ ಕೆ. ಮುಖ್ಯ ಅತಿಥಿಯಾಗಿದ್ದರು.

ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ವಿಭಾಗದ ಮುಖ್ಯಸ್ಥೆ ಡಾ.ಕ್ಲಾರೆಟ್ ಮೆಂಡೋಸಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಜ್ಯೋತಿ ನಿರೂಪಿಸಿದರು, ಉಪನ್ಯಾಸಕ ಡಾ. ನಾಗೇಂದ್ರ ವಂದಿಸಿದರು.

Leave a Reply

  Subscribe  
Notify of