ಪ್ರಿವೆಂಷನ್‍ಆಫ್ ಸೆಕ್ಸುವಲ್ ಹರ್ಯಾಸ್‍ಮೆಂಟ್ ಕಾರ್ಯಾಗಾರ

Spread the love

ಪ್ರಿವೆಂಷನ್‍ಆಫ್ ಸೆಕ್ಸುವಲ್ ಹರ್ಯಾಸ್‍ಮೆಂಟ್ ಕಾರ್ಯಾಗಾರ

ಮೂಡುಬಿದಿರೆ: ಉದ್ಯೋಗಿಗಳಿಗೆ ಯಾವುದೇ ತೊಂದರೆಯಿಲ್ಲದ ವಾತಾವರಣವಿದ್ದಾಗ ಮಾತ್ರ ಸಂಸ್ಥೆಯ ಅಭ್ಯುದಯ ಸಾಧ್ಯ ಎಂದು ಬೆಂಗಳೂರಿನ ಖ್ವೆಸ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಇದರ ಸಿಎಸ್‍ಆರ್ ಮ್ಯಾನೇಜರ್ ಸ್ಮಿತಾ ಬಿ. ಶ್ರೀನಿವಾಸ್ ಹೇಳಿದರು.

ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗ ಮತ್ತು ಆಂತರಿಕ ದೂರು ಕಮಿಟಿ ಆಯೋಜಿಸಿದ್ದ ಪಾಶ್(ಪ್ರಿವೆಂಷನ್‍ಆಫ್ ಸೆಕ್ಸುವಲ್ ಹರ್ಯಾಸ್‍ಮೆಂಟ್) ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.

ಯಾವುದೇ ಕ್ಷೇತ್ರದಲ್ಲಿ ಲೈಂಗಿಕ ಕಿರುಕಳವಾದರೂ ಅಕ್ಷಮ್ಯ ಅಪರಾಧ. ಅದರ ವಿರುದ್ದ ಪ್ರತಿಯೊಬ್ಬರೂ ಧ್ವನಿಯಾಗಬೇಕು ಎಂದ ಅವರು, ಪತ್ರಕರ್ತೆ, ವಿಶಾಖ, ಹೆಣ್ಣುಮಗುವಿನ ಬಾಲ್ಯವಿವಾಹದ ವಿರುದ್ಧದ ಹೋರಾಟದ ಫಲವಾಗಿ ಬಂದ ವಿಶಾಖ ಗೈಡ್‍ಲೈನ್ಸ್‍ಕುರಿತು ಬೆಳಕು ಚೆಲ್ಲಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಪ್ರಾಂಶುಪಾಲ ಡಾ. ಕುರಿಯನ್‍ಯಾವುದೇ ಸಂಸ್ಥೆ ಅಭಿವೃದ್ಧಿಯಾಗಬೇಕಾದರೆ, ಗಂಡು-ಹೆಣ್ಣು ಬೇಧಭಾವವಿಲ್ಲದೆ ಸಮಾನಕೊಡುಗೆ ನೀಡಬೇಕು. ಒಬ್ಬರನ್ನೊಬ್ಬರು ಅರ್ಥೈಸಿ, ಗೌರವಿಸಿದಾಗ ಉತ್ತಮ ಬಾಂಧವ್ಯ ವೃದ್ಧಯಾಗುತ್ತದೆ ಎಂದರು.

ಆಂತರಿಕದೂರು ಕಮಿಟಿಯ ಸಂಯೋಜಕಿ ಮೂಕಾಂಬಿಕಾ ಸಮಾಜಕಾರ್ಯ, ಎಂಎಚ್‍ಆರ್‍ಡಿ, ಪತ್ರಿಕೋದ್ಯಮ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶರಣ್ಯರಾವ್ ನಿರೂಪಿಸಿದರು.


Spread the love