ಆಳ್ವಾಸ್ ನಲ್ಲಿ ಕಂಪ್ಯೂಟರ್ ಕಲಿಯೋಣ ಕಾರ್ಯಕ್ರಮ

ಆಳ್ವಾಸ್ ನಲ್ಲಿ ಕಲಿಯೋಣ ಕಂಪ್ಯೂಟರ್ ಕಾರ್ಯಕ್ರಮ

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿ-ಮೇನಿಯಾಕ್ಸ್ ಸಂಘವು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವನ್ನು ಮೂಡಿಸುವ “ಕಂಪ್ಯೂಟರ್ ಕಲಿಯೋಣ” ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮವನ್ನು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ಮಂಜುನಾಥ ಕೊಠಾರಿ ಅವರು ಉದ್ಘಾಟಿಸಿದರು. ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ವೆಂಕಟೇಶ್ , ಹೇಮಂತ್ ಕುಮಾರ್ , ಚಂಚಲ್ ಆಂಟನಿ ಮತ್ತು ಫೋರಮ್ ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು .

ಆಳ್ವಾಸ್ ಹೈಸ್ಕೂಲಿನ ಶಿಕ್ಷಕರು, ನಯನಾ ಮತ್ತು ಸೌಧಮಿನಿ ಸಹಕರಿಸಿದರು. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ನ ಮೂಲ ವಿಷಯಗಳ ತಿಳುವಳಿಕೆಯನ್ನು ಫೋರಮ್ ಸಂಯೋಜಕರಾಧ ನಿಕಿತಾ ಕಾಳೆ ಅವರು ಈ ಕಾರ್ಯಾಗಾರದಲ್ಲಿ ಭೋಧಿಸಿದರು.

ಇಂದಿನ ವೈಜ್ಞಾನಿಕ ಯುಗದಲ್ಲಿ ಕಂಪ್ಯೂಟರ್ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಪ್ರಾತ್ಯಕ್ಷಿಕೆ ಮತ್ತು ವಿವರಣಾತ್ಮಕ ಬೋಧನೆಗಳನ್ನು ಪ್ರಸ್ತುತಪಡಿಸಲಾಯಿತು .