‘ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್’ ಜಿಲ್ಲಾಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ನೇಮಕ

Spread the love

‘ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್’ ಜಿಲ್ಲಾಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ನೇಮಕ

ಉಡುಪಿ: ನರೇಂದ್ರ ಮೋದಿಗೆ ಟಾಂಗ್‌ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೊಸ ಹೊಸದೊಂದು ತಂತ್ರವನ್ನು ಅನುಸರಿಸುತ್ತಿದೆ. ‘ನಮೋ ಬ್ರಿಗೇಡ್’ಗೆ ಪರ್ಯಾಯವಾಗಿ ‘ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್’ ಎಂಬ ಸಂಘಟನೆಯನ್ನು ಕಾಂಗ್ರೆಸ್‌  ಈಗಾಗಲೇ ಹುಟ್ಟು ಹಾಕಿದೆ.

ಪ್ರತಿ ಜಿಲ್ಲೆಯಲ್ಲೂ ‘ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್’ ಸಂಘಟನೆ ಬಲಿಷ್ಟ ಮಾಡುವುದರ ಜೊತೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್‌ ಹಳ್ಳಿ ಹಳ್ಳಿಗಳಿಗೆ ಹೋಗಿ ಕಾಂಗ್ರೆಸ್‌ ಪರ ಬಿರುಸಿನ ಪ್ರಚಾರ ನಡೆಸಲಿದೆ.

ಅದರಂತೆ ಉಡುಪಿ ಜಿಲ್ಲೆಯ  ‘ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್’ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ  ಸ್ಟೀವನ್ ಕುಲಾಸೊ ಉದ್ಯಾವರ ಅವರನ್ನು ನೇಮಿಸಿಲಾಗಿದೆ.

ಸಂಘಟನೆಯ ರಾಜ್ಯಾಧ್ಯಕ್ಷರಾದ ರಂಜಿತ್ ಕುಮಾರ್ ಪಿ ಎಸ್ ಅವರು ಅವರು ನೇಮಕದ ಆದೇಶವನ್ನು ಹೊರಡಿಸಿದ್ದು, ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್‌ ಹಳ್ಳಿ ಹಳ್ಳಿಗಳಿಗೆ ಹೋಗಿ ಕಾಂಗ್ರೆಸ್‌ ಪರ ಬಿರುಸಿನ ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ.

ಯುವ  ಕಾಂಗ್ರೆಸಿನಲ್ಲಿ ಸಕ್ರಿಯವಾಗಿರುವ ಸ್ಟೀವನ್ ಕುಲಾಸೊ ಉತ್ತಮ ವಾಗ್ಮಿಯಾಗಿದ್ದು, ಐಸಿವೈಎಮ್, ಜೇಸಿಸ್ ಹಾಗೂ ಇತರ ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅತ್ಯುತ್ತಮ ಕಾರ್ಯನಿರ್ವಾಹಕರು ಕೂಡ ಅವರಾಗಿದ್ದಾರೆ.


Spread the love