ಉಡುಪಿ: ಗಾಂಜಾ ಸಾಗಾಟದಲ್ಲಿ ಇಬ್ಬರ ಬಂಧನ – ರೂ. 72 ಲಕ್ಷ ಮೌಲ್ಯದ ವಸ್ತುಗಳ ವಶ
ಉಡುಪಿ: ಉಡುಪಿ ತಾಲ್ಲೂಕು, ಕಡೆಕಾರು ಗ್ರಾಮದ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಬಂಧಿತರನ್ನು ಗಣೇಶ (38, ಮೈಸೂರು ಜಿಲ್ಲೆ) ಹಾಗೂ ಪಿ. ಗೋಪಾಲ ರೆಡ್ಡಿ (43, ಆಂಧ್ರಪ್ರದೇಶ) ಎಂದು ಗುರುತಿಸಲಾಗಿದೆ.
ಸಹಾಯಕ ಪೊಲೀಸ್ ಅಧೀಕ್ಷಕ (ಕಾರ್ಕಳ ಉಪವಿಭಾಗ) ಡಾ. ಹರ್ಷ ಪ್ರಿಯಂವದಾ ಐಪಿಎಸ್ ಅವರ ನಿರ್ದೇಶನದ ಮೇರೆಗೆ, ಡಿ.ಟಿ. ಪ್ರಭು (ಪೊಲೀಸ್ ಉಪಾಧೀಕ್ಷಕ, ಉಡುಪಿ ಉಪವಿಭಾಗ) ಅವರ ಮಾರ್ಗದರ್ಶನದಲ್ಲಿ, ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಸೆನ್ ಅಪರಾಧ ಪೊಲೀಸ್ ಠಾಣಾ ಪ್ರಭಾರಿ ಅಧಿಕಾರಿಗಳು ಸೇರಿಕೊಂಡ ವಿಶೇಷ ತಂಡ ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿಗೊಳಿಸಿದೆ.
ತಂಡದಲ್ಲಿ ಪ್ರವೀಣ್ ಕುಮಾರ್, ಪ್ರವೀಣ್ ಶೆಟ್ಟಿಗಾರ್, ಯತೀನ್ ಕುಮಾರ್, ರಾಘವೇಂದ್ರ, ದೀಕ್ಷಿತ್, ನಿಲೇಶ್, ಮಾಯಪ್ಪ, ಮುತ್ತಪ್ಪ, ಪವನ್ (ಸೆನ್ ಠಾಣೆ), ಪ್ರವೀಣ್ (ಮಲ್ಪೆ ಠಾಣೆ), ಶ್ರೀನಿವಾಸ್ (ಉಡುಪಿ ಸಂಚಾರ ಠಾಣೆ) ಸೇರಿದಂತೆ ಹಲವಾರು ಪೊಲೀಸರು ಭಾಗವಹಿಸಿದ್ದರು.
ವಶಪಡಿಸಿಕೊಂಡ ವಸ್ತುಗಳು
• ಗಾಂಜಾ: 65 ಕೆ.ಜಿ. 039 ಗ್ರಾಂ (ಅಂದಾಜು ಮೌಲ್ಯ ರೂ. 32–50 ಲಕ್ಷ)
• ಗೂಡ್ಸ್ ಲಾರಿ: ಮೌಲ್ಯ ರೂ. 20 ಲಕ್ಷ
• ನಗದು: ರೂ. 1,520/-
• ಮೊಬೈಲ್ ಫೋನ್ಗಳು: 2 (ಅಂದಾಜು ಮೌಲ್ಯ ರೂ. 20,000/-) ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಸುಮಾರು ರೂ. 72,21,520/-. ಆಗಿರುತ್ತದೆ.