ಉಡುಪಿ ಜಿಪಂ ನೂತನ ಸಿಇಒ ಆಗಿ ಯುಪಿಎಸ್ ಸಿ ಟಾಪರ್ ನವೀನ್ ಭಟ್ ನೇಮಕ

Spread the love

ಉಡುಪಿ ಜಿಪಂ ನೂತನ ಸಿಇಒ ಆಗಿ ಯುಪಿಎಸ್ ಸಿ ಟಾಪರ್ ನವೀನ್ ಭಟ್ ನೇಮಕ

ಉಡುಪಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಭಾನುವಾರ ಆದೇಶ ಹೊರಡಿಸಿದೆ.

ಜಿಲ್ಲೆಯ ನೂತನ ಸಿ ಇ ಒ ಆಗಿ ಹಾಸನ ಉಪ ವಿಭಾಗ ಸಹಾಯಕ ಆಯುಕ್ತ ಡಾ.ನವೀನ್ ಭಟ್ ವೈ. ಅವರನ್ನು ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ನೇಮಕಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ನಿವಾಸಿ 28 ವರ್ಷದ ನವೀನ್ ಭಟ್ 2017ರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದಿದ್ದರು. ಐಎಎಸ್ ಕರ್ನಾಟಕ ಕೇಡರ್ ಸೇವೆಗೆ ಆಯ್ಕೆಯಾಗಿ ಪ್ರೊಬೆಷನರಿ ತರಬೇತಿ ಮುಗಿಸಿದ್ದರು. ವೈದ್ಯರೂ ಆಗಿರುವ ಹಿನ್ನೆಲೆಯಲ್ಲಿ ಇವರಿಗೆ ದೆಹಲಿಯಲ್ಲಿ 3 ತಿಂಗಳು ಕೇಂದ್ರ ಆರೋಗ್ಯ ಇಲಾಖೆಗೆ ಸಂಬಂಧಿಸಿ ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಯ ತರಬೇತಿ ನೀಡಲಾಗಿತ್ತು. ಬಳಿಕ ಹಾಸನ ಜಿಲ್ಲೆ ಉಪ ವಿಭಾಗ ಆಯುಕ್ತರಾಗಿ 10 ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು.


Spread the love