ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಹತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಅಕ್ಕಿ ಹಾಗೂ ದಿನಸಿ ವಿತರಣೆ

Spread the love

ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಹತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಅಕ್ಕಿ ಹಾಗೂ ದಿನಸಿ ವಿತರಣೆ

ಉಡುಪಿ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಸರಕಾರ ಜಾರಿಗೊಳಿಸಿದ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಉಡುಪಿ ಜಿಲ್ಲೆಯಾದ್ಯಂತ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಲು ಉಡುಪಿ ಜಿಲ್ಲಾ ಕಾಂಗ್ರೆಸ್ನ ವ್ಯಾಪ್ತಿಗೊಳಪಟ್ಟ ಹತ್ತು ಬ್ಲಾಕ್ ಅಧ್ಯಕ್ಷರುಗಳಿಗೆ ದಿನಬಳಕೆಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಅವರು ಲಾಕ್ಡೌನ್ನಿಂದ ತೊಂದರೆಗೊಳಗಾದ ಜನರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಕೆ.ಪಿ.ಸಿ.ಸಿ. ನೀಡಿದ ವಿಜ್ಞಾಪನೆಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಕಷ್ಟಕ್ಕೊಳಗಾದ ಜನರಿಗೆ ತರಕಾರಿ, ದಿನಸಿ ವಸ್ತುಗಳನ್ನು ನೀಡಿ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡುತ್ತಾ ಮಾನವೀಯತೆಯಿಂದ ಈ ಸಂದರ್ಭದಲ್ಲಿ ಧರ್ಮ, ಜಾತಿ, ನೋಡದೆ ಸಮುದಾಯದಲ್ಲಿರುವ ಹಿಂದುಳಿದವರಿಗೆ ಆರ್ಥಿಕ ಸಾಮಾಜಿಕವಾಗಿ ನೆರವು ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡುತ್ತಾ ಜಿಲ್ಲಾ ಕಾಂಗ್ರೆಸ್ನ ಟಾಸ್ಕ್ ಫೋರ್ಸ್ ಮುಖಾಂತರ ದಿನ ಬಳಕೆಯ ಸಾಮಾಗ್ರಿಗಳನ್ನು ಪ್ರತೀ ಬೂತ್ ಮಟ್ಟದಲ್ಲಿ ಸ್ಥಳಿಯರ ಸಹಕಾರ ಪಡೆದು ಗರಿಷ್ಠ ಜನರಿಗೆ ಕಿಟ್ಗಳನ್ನು ವಿತರಿಸುವ ಕೆಲಸವನ್ನು ಮಾನವೀಯತೆ ದೃಷ್ಟಿಯಿಂದ ಪ್ರತೀ ಬ್ಲಾಕ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಒಗ್ಗಟ್ಟಿನಿಂದ ನಿರ್ವಹಿಸಲು ಕರೆ ನೀಡಿದರು.

ಮಾಜಿ ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಯು.ಆರ್. ಸಭಾಪತಿಯವರು ಆರ್ಥಿಕ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

  ಬ್ಲಾಕ್‍ಗಳಿಗೆ  ಈ ಕೆಳಗಿನ ನಾಯಕರುಗಳಿಗೆ ಕಿಟ್‍ಗಳನ್ನು ಹಸ್ತಾಂತರ ಮಾಡುವ ಜವಾಬ್ದಾರಿಯನ್ನು ನೀಡಲಾಗಿದ್ದು ಅವರುಗಳಿಗೆ  ಹಸ್ತಾಂತರಿಸಲಾಯಿತು.

ಉಡುಪಿ – ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಕೆ. ಜನಾರ್ದನ ಭಂಡಾರ್ಕಾರ್, ಬೈಂದೂರು – ಮದನ್ ಕುಮಾರ್ , ಕುಂದಾಪುರ – ಹರಿಪ್ರಸಾದ್ ಶೆಟ್ಟಿ, ಕೋಟ- ಶಂಕರ್ ಕುಂದರ್, ರೋಶನಿ ಒಲಿವರ್, ಬ್ರಹ್ಮಾವರ- ನಿತ್ಯಾನಂದ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಹರೀಶ್ ಶೆಟ್ಟಿ ಕೀಳಿಂಜೆ, ಕಾಪು- ನವೀನ್ಚಂದ್ರ ಸುವರ್ಣ ಅಡ್ವೆ, ಹಿರಿಯಡ್ಕ – ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಕಾರ್ಕಳ – ಪ್ರಭಾಕರ ಬಂಗೇರಾ, ಸುಧಾಕರ್ ಕೋಟ್ಯಾ.,

, ಉದ್ಯಾವರ ನಾಗೇಶ್ ಕುಮಾರ್, ಡಾ. ಸುನೀತ ಶೆಟ್ಟಿ ಕೊಕ್ಕರ್ಣೆ, ರಾಜೇಶ್ ಶೆಟ್ಟಿ ಕುಮ್ರಗೋಡ, ಹಬೀಬ್ ಅಲಿ, ಭುಜಂಗ ಶೆಟ್ಟಿ, ದಿನಕರ ಹೇರೂರು, ಬಾಲಕೃಷ್ಣ ಪೂಜಾರಿ, ಉಪೇಂದ್ರ ಮೆಂಡನ್, ಉಪೇಂದ್ರ ಗಾಣಿಗ, ಶ್ರೀನಿವಾಸ ಹೆಬ್ಬಾರ್, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಮೊದಲಾದವರು ಉಪಸ್ಥಿರಿದ್ದರು. ಪ್ರಾರಂಭದಲ್ಲಿ ಸುಕುಮಾರ್ ಪಡುಬಿದ್ರಿ ಸ್ವಾಗತಿಸಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್ ವಂದಿಸಿದರು.


Spread the love