ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಾಫರ್ ಷರೀಪ್, ಅಂಬರೀಶ್ ಗೆ ನುಡಿ ನಮನ

Spread the love

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಾಫರ್ ಷರೀಪ್, ಅಂಬರೀಶ್ ಗೆ ನುಡಿ ನಮನ

ಉಡುಪಿ: ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾದ ಜಾಫರ್ ಷರೀಪ್ ಮತ್ತು ಅಂಬರೀಶ್ರವರನ್ನು ಕಳಕೊಂಡು ಪಕ್ಷ ಅತೀ ದೊಡ್ಡ ನಷ್ಟವನ್ನು ಅನುಭವಿಸಿದೆ. ಈ ಇಬ್ಬರ ಸೇವೆಯನ್ನು ಕಾಂಗ್ರೆಸ್ ಪಕ್ಷದ ಎಂದೂ ಮರೆಯಲು ಸಾಧ್ಯವಿಲ್ಲ. ಓರ್ವ ಜನಪ್ರಿಯ ನಟನಾಗಿ ಸೇವೆ ಸಲ್ಲಿಸುತ್ತಿರುವ ಹೊತ್ತಿನಲ್ಲೇ ಅದರ ಜೊತೆಯಲ್ಲಿ ರಾಜಕಾರಣಿಯಾಗಿ ಜನಮಾನಸದಲ್ಲಿ ನೆಲೆ ನಿಂತಿದ್ದರು. ತನ್ನ ಅಧಿಕಾರಾವಧಿಯಲ್ಲಿ ಜನಪರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ನೇರ ನಡತೆಯಿಂದ ಅಂಬರೀಶ್ ಜನಪ್ರಿಯರಾಗಿದ್ದರು. ಜಾಫರ್ ಷರೀಪ್ರವರು ಜಾತ್ಯಾತೀತ ನೆಲೆಗೆ ಬದ್ದರಾಗಿ ಯಾವ ಸಂದರ್ಭದಲ್ಲೂ ಕೂಡಾ ತನ್ನ ನಿಲುವಿಂದ ವಿಚಲಿತರಾಗದೆ ರಾಜಕಾರಣ ಮಾಡಿಕೊಂಡು ಬಂದವರು. ರೈಲ್ವೆ ಗೇಜ್ ಪರಿವರ್ತನೆಗೆ ಗಣನೀಯ ಕೊಡುಗೆ ನೀಡಿದ ಷರೀಪ್ರವರು ಕೇವಲ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ರೈಲ್ವೆ ಅಭಿವೃದ್ಧಿಯನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸಿ ಕ್ರಾಂತಿಯನ್ನು ಮಾಡಿದವರು. ಅವರ ಕಾಲದಲ್ಲಿ 1000 ಕಿ.ಮೀ. ನಷ್ಟು ರೈಲ್ವೆ ಹಳಿಗಳನ್ನು ಕರ್ನಾಟಕ ರಾಜ್ಯ ಒಂದರಲ್ಲೇ ವಿಸ್ತರಣೆಯಾಗಿತ್ತು. ಮಂಗಳೂರಿನ ಯಲಹಂಕದಲ್ಲಿರುವ ರೈಲು ಮತ್ತು ಗಾಲಿ ಕಾರ್ಖಾನೆ ಸ್ಥಾಪನೆಯಾಗಲು ಷರೀಫ್ರವರು ಶ್ರಮವಹಿಸಿದ್ದರು. ಇಂತಹ ಧೀಮಂತ ನಾಯಕರಿಬ್ಬರ ಅಗಲುವಿಕೆಯಿಂದ ಪಕ್ಷ ಬಡವಾಗಿದೆ. ಈ ಈರ್ವ ಧೀಮಂತ ನಾಯಕರು ನಡೆದ ದಾರಿಯಲ್ಲಿ ನಡೆಯುವುದು ನಾವು ಅವರಿಗೆ ಅರ್ಪಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ಕೆ.ಪಿ.ಸಿ.ಸಿ. ಉಡುಪಿ ಉಸ್ತುವಾರಿ ಭರತ್ ಮುಂಡೋಡಿಯವರು ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಜರಗಿದ ಇತ್ತೀಚಿಗೆ ಅಗಲಿದ ಕಾಂಗ್ರೆಸ್ ಪಕ್ಷದ ನಾಯಕರಾದ ಜಾಪರ್ ಷರೀಪ್ ಮತ್ತು ಅಂಬರೀಶ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ನುಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಮಾತನಾಡುತ್ತಾ ಉಭಯ ನಾಯಕರು ಇಂದು ನಮ್ಮ ಮುಂದಿಲ್ಲ ಅವರು ನಡೆದ ದಾರಿ ನಮ್ಮ ಮುಂದಿದೆ. ನಾವು ಆ ದಾರಿಯಲ್ಲಿ ಸಾಗಬೇಕಾಗಿದೆ. ಓರ್ವ ಜನಪ್ರಿಯ ಚಿತ್ರನಟನಾಗಿ ಅದರ ಜನಪ್ರಿಯತೆಯನ್ನು ಪಕ್ಷವನ್ನು ಸಂಘಟಿಸುವಲ್ಲಿ ಅಂಬರೀಶ್ರವರು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಅದರೊಂದಿಗೆ ತನ್ನ ನೇರ ದಿಟ್ಟ ನಡತೆಯಿಂದ ಜನ ಮಾನಸದಲ್ಲಿ ನೆಲೆಯಾಗಿದ್ದಾರೆ ಅದರೊಂದಿಗೆ ಅತ್ಯಂತ ಜಾತ್ಯಾತೀತ ನಾಯಕರಾ ಜಾಫರ್ ಷರೀಪ್ ರೈಲ್ವೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಯಾವತ್ತೂ ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಓರ್ವ ಸಜ್ಜನ ರಾಜಕಾರಣಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಈ ಈರ್ವರ ನಿಧನದಿಂದಾಗಿ ಕರ್ನಾಟಕ ದೂರದೃಷ್ಟಿಯ ರಾಜಕಾರಣ ಹಾಗೂ ಮೌಲ್ಯಯುತ ರಾಜಕಾರಣಿಗಳನ್ನು ಕಳಕೊಂಡಿದೆ ಎಂದರು.

 ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, , ಉದಯ ಕುಮಾರ್ ಶೆಟ್ಟಿ ಮುನಿಯಾಲುಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ನಿತ್ಯಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸುಧಾಕರ ಕೋಟ್ಯಾನ್, ಪ್ರವೀಣ್ ಶೆಟ್ಟಿ, ಶ್ರೀಮತಿ ಸರಳಾ ಕಾಂಚನ್, ಉಸ್ತುವಾರಿಗಳಾದ ಮಹಾಬಲ ಕುಂದರ್, , ಹಬೀಬ್ ಆಲಿ, ಮಲ್ಲಿಕಾ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಡಾ. ಸುನಿತಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ವಾಗ್ಲೆ, ಆರ್.ಜಿ.ಪಿ.ಆರ್.ಎಸ್. ಅಧ್ಯಕ್ಷರಾದ ರೊಶನಿ ಒಲಿವರ್, ಐಟಿ ಸೆಲ್ ಅಧ್ಯಕ್ಷರಾದ ಸತೀಶ್ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್ ಜಿಲ್ಲಾ ಕಾನೂನು ಘಟಕ ಆಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಳ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ಯತೀಶ್ ಕರ್ಕೇರಾ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಕೃಷ್ಣಮೂರ್ತಿ ಕಾರ್ಕಳ, ರವಿಶಂಕರ್ ಕಾರ್ಕಳ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಕೊನೆಯಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ವಂದಿಸಿದರು.


Spread the love