ಉಡುಪಿ ಜಿಲ್ಲಾ ಯುವ ಕಾಂಗ್ರೆಸ್  ಅಧ್ಯಕ್ಷರಾಗಿ ದೀಪಕ್ ಕೋಟ್ಯಾನ್ ಇನ್ನಾ ಆಯ್ಕೆ

Spread the love

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್  ಅಧ್ಯಕ್ಷರಾಗಿ ದೀಪಕ್ ಕೋಟ್ಯಾನ್ ಇನ್ನಾ ಆಯ್ಕೆ

ಉಡುಪಿ: ಭಾರತೀಯ ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಗುರುವಾರವಾರ ಪ್ರಕಟವಾಗಿದ್ದು ದೀಪಕ್ ಕೋಟ್ಯಾನ್ ಇನ್ನಾ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಂದ ಒಟ್ಟು 2352 ಸದಸ್ಯರು ಐವೈಸಿ ಸೆಲ್ಫ್ ವೋಟಿಂಗ್ ಅ್ಯಪ್ ಮೂಲಕ ಮತದಾನದಲ್ಲಿ ಪಾಲ್ಗೊಂಡು ಮತ ಚಲಾವಣೆ ಮಾಡಿದ್ದು, ದೀಪಕ್ ಕೋಟ್ಯಾನ್ 1186 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿಯಾಗಿದ್ದ ಹಿಂದಿನ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಅವರು 698 ಮತಗಳನ್ನು ಪಡೆದಿರುತ್ತಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಿಂದಿನ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಮತ್ತು ಯುವ ನಾಯಕ ದೀಪಕ್ ಕೋಟ್ಯಾನ್ ನಡುವೆ ತೀವ್ರ ಪೈಪೋಟಿ ಕೂಡ ಏರ್ಪಟ್ಟಿತ್ತು.

ಮೂರು ವರ್ಷಗಳ ಅವಧಿಗೆ ನಡೆಯುವ ಚುನಾವಣಾ ಪ್ರಕ್ರಿಯೆ ಈ ಬಾರಿ ಸಂಪೂರ್ಣ ಆನ್ ಲೈನ್ ಮತದಾನದ ಮೂಲಕ ನಡೆದಿತ್ತು. ಅದಕ್ಕಾಗ ಐವೈಸಿ ಅ್ಯಪ್ ಸಿದ್ದಪಡಿಸಿ ಮತದಾನ ಮಾಡಲು ಅರ್ಹರಾಗಿರುವ ಯುವ ಕಾಂಗ್ರೆಸ್ ಸದಸ್ಯರು ತಮ್ಮ ಮೊಬೈಲ್ ಮೂಲಕವೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಪ್ಲೇಸ್ಟೋರ್ ನಲ್ಲಿ ಅ್ಯಪನ್ನ ಡೌನ್ ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್, ಛಾಯಾಚಿತ್ರವುಳ್ಳ ಗುರುತಿನ ಚೀಟಿ ದಾಖಲು ಮಾಡಿ ಯುವ ಕಾಂಗ್ರೆಸ್ ಸಮಿತಿಯ ಸದಸ್ಯರು ಮತದಾನ ಮಾಡಿದ್ದರು.


Spread the love