ಉಡುಪಿ: ಪರಿಸರಕ್ಕೆ ಪೂರಕವಾಗಿ ನಮ್ಮ ಬದುಕನ್ನು ರೂಪಿಸಿ ಕೊಳ್ಳಬೇಕು. ಎಲ್ಲಾ ಮತೀಯರಿಗೂ ಪಕೃತಿ ಮಾತೆ ಒಬ್ಬಳೆ. ಅದುದರಿಂದ ಪಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ಧರ್ಮಗುರುಗಳಾದ ವಂ ಆಲ್ಬನ್ ಡಿಸೋಜ ಹೇಳಿದರು
ಅವರು ಕಲ್ಮಾಡಿ ಸರ್ವಧರ್ಮ ಸೌಹಾರ್ದ ಸಮಿತಿ ಹಾಗು ರೋಟರಿ ಮಲ್ಪೆ ಕೊಡವೂರು ಜಂಟಿಯಾಗಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಬಾನುವಾರ ಅಯೋಜಿಸದ್ದ ವನಮಹೋತ್ಸವದಲ್ಲಿ ಸಸಿ ನೆಟ್ಟು ಮಾತನಾಡಿದರು.
ಹಸಿರೇ ಉಸಿರು ಎಂಬಂತೆ ಕಲುಸಿತಗೊಳ್ಳುತ್ತಿರುವ ವಾತಾವರಣವನ್ನು ಉಳಿಸಿಗೊಳ್ಳಲು ನಾವು ಗಿಡಗಳನ್ನು ನೆಡುವ ಮೂಲಕ ಕಂಕಣ ಬದ್ದರಾಗಬೇಕು ಎಂದು ಅತಿಥಿ ರೋಟರಿ 3180 ವಲಯ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಕರೆ ನೀಡದರು.
ಈ ಸಂದರ್ಭದಲ್ಲಿ ಶ್ರೀ ಶಂಕರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಟಿ.ರಾಘವೇಂದ್ರ ರಾವ್, ಪಂಚರತ್ನ ಪ್ಯಾರಡೈಸ್‍ನ ಸಂತೋಷ್ ಶೆಟ್ಟಿ, ರೋಟರಿ ಮಾಜಿ ಸಹಾಯಕ ಗವರ್ನರ್ ಮಹೇಶ್ ಕುಮಾರ್ ಅನಿವಾಸಿ ಭಾರತೀಯ ದಿನೇಶ್ ಬಾಯರಿ ಉಪಸ್ಥಿತರಿದ್ದರು.
ಸರ್ವಧರ್ಮ ಸೌಹಾರ್ದ ಸಮಿತಿ ಅಧ್ಯಕ್ಷ ನವೀನ್ ಫೆರ್ನಾಂಡೀಸ್ ರವರು ಸ್ವಾಗತಿಸಿದರು. ರೋಟರಿ ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು. ಎವ್ಜಿನ್ ಲಸ್ರಾದೋ ನಿರೂಪಿಸಿದರು.






















