ಉಡುಪಿ ಪ್ರವಾಸಿ ಮಂದಿರದ ಕರೆಂಟ್ ಬಿಲ್ ಬಾಕಿ, ವಿದ್ಯುತ್ ಕಡಿತಗೊಳಿಸಿದ ಮೆಸ್ಕಾಂ!

Spread the love

ಉಡುಪಿ ಪ್ರವಾಸಿ ಮಂದಿರದ ಕರೆಂಟ್ ಬಿಲ್ ಬಾಕಿ, ವಿದ್ಯುತ್ ಕಡಿತಗೊಳಿಸಿದ ಮೆಸ್ಕಾಂ!

ಉಡುಪಿ: ನಗರದ ಹೃದಯಭಾಗದಲ್ಲಿರುವ ಹಳೆ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಳಿಕ ಶಾಸಕರ ಮಧ್ಯಪ್ರವೇಶದ ಬಳಿಕ ಮತ್ತೆ ಪುನರ್ ಸಂಪರ್ಕ ನೀಡಿದ ಪ್ರಸಂಗ ಉಡುಪಿಯಲ್ಲಿ ಭಾನುವಾರ ನಡೆಯಿತು.

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪ್ರವಾಸಿ ಮಂದಿರ ಕತ್ತಲೆಯಲ್ಲಿ

ಬನ್ನಂಜೆಯಲ್ಲಿರುವ ಹಳೆ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಬಾಕಿ ಇದ್ದು ಕಟ್ಟದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೆಸ್ಕಾಂ ಇಲಾಖೆ ತನ್ನ ನಿಯಮ ಪಾಲನೆ ಮಾಡಿತ್ತು. ಪ್ರವಾಸಿ ಮಂದಿರದಲ್ಲಿ ಇಬ್ಬರು ಪ್ರವಾಸಿಗರಿದ್ದು ಕತ್ತಲೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಪ್ರವಾಸಿ ಮಂದಿರದ ಸಿಬಂದಿಗಳಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ ಬಳಿಕ ಮೆಸ್ಕಾಂ ಅಧಿಕಾರಿಗಳು ಆಗಮಿಸಿ ಮತ್ತೆ ವಿದ್ಯುತ್ ಸಂಪರ್ಕವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಬರೆದು ಕೊಂಡಿದ್ದು ನಿನ್ನೆ ಪಡುಬಿದ್ರೆ ಗ್ರಾಮ ಪಂಚಾಯತ್ ಕಚೇರಿ, ತೆಂಕನಿಡಿಯೂರು ಸರಕಾರಿ ಶಾಲೆಯ ವಿದ್ಯುತ್ ಕಡಿತಗೊಳಿಸಲು ಮುಂದಾಗಿದ್ದ ಮೆಸ್ಕಾಂ ಇಲಾಖೆ. ಸರಕಾರಿ ಕಚೇರಿಯ ವಿದ್ಯುತ್ ಬಿಲ್ ಕಟ್ಟಲೂ ಸರಕಾರದ ಬೊಕ್ಕಸದಲ್ಲಿ ಹಣವಿಲ್ಲ. ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments