ಉಡುಪಿ: ಸಂಭ್ರಮದ ಚೂರ್ಣೋತ್ಸವ

ಉಡುಪಿ: ಸಂಭ್ರಮದ ಚೂರ್ಣೋತ್ಸವ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿ ಮರುದಿನ ನಡೆಯುವ ಚೂರ್ಣೋತ್ಸವ ಮಂಗಳವಾರ ಸಂಭ್ರಮದಿಂದ ಸಂಪನ್ನಗೊಂಡಿತು.

ಮಂಗಳವಾರ ಬೆಳಗ್ಗೆ ಪರ್ಯಾಯ ಪಲಿಮಾರು ಶ್ರೀಪಾದರು ಮಹಾಪೂಜೆಯನ್ನು ಮುಗಿಸಿದ ಬಳಿಕ ಚೂರ್ಣೋತ್ಸವ ಆರಂಭಗೊಂಡಿತು. ಬ್ರಹ್ಮರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ಸಾವಿರಾರು ಭಕ್ತರ ಸಮ್ಮುಖ ಪ್ರದಕ್ಷಿಣೆ ಬಂದು ವಸಂತ ಮಹಲ್ನಲ್ಲಿ ಅಷ್ಟಾವಧಾನ, ಓಲಗಮಂಟಪ ಪೂಜೆ ನಡೆಯಿತು. ಅನಂತರ ಮಧ್ವ ಸರೋವರದಲ್ಲಿ ಉತ್ಸವಮೂರ್ತಿ ಸಹಿತವಾಗಿ ಎಲ್ಲ ಮಠಾಧೀಶರು ಅವಭೃಥಸ್ನಾನ ಮಾಡಿ ಸಪೊ¤àತ್ಸವವನ್ನು ಕೃಷ್ಣಾರ್ಪಣಗೈದರು.

ಪರ್ಯಾಯ ಪಲಿಮಾರು ಅದಮಾರು ಹಿರಿಯ, ಕಿರಿಯ, ಸೋದೆ, ಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡಿದ್ದರು.