ಉಳ್ಳಾಲ ತಲವಾರು ಧಾಳಿಗೆ ಒಳಗಾದ ಸೈಫಾನ್ ಆಸ್ಪತ್ರೆಯಲ್ಲಿ ಸಾವು

Spread the love

ಮಂಗಳೂರು: ಉಳ್ಳಾಲದಲ್ಲಿ ದುಷ್ಕರ್ಮಿಗಳ ತಲವಾರು ಧಾಳಿಗೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಮ್ಮದ್ ಸೈಫಾನ್ (20) ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

image001shafwan-ullal-020160430-001

ಪೆರ್ಮನ್ನೂರು ನಿವಾಸಿಯಾದ ಮಹಮ್ಮದ ಸೈಫಾನ್ ಎಪ್ರಿಲ್ 26 ರಂದು ರಾತ್ರಿ ಕ್ಯಾಟರಿಂಗ್ ಕೆಲಸ ಮುಗಿಸಿ ವಾಪಾಸು ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ತಲವಾರಿನಿಂದ ಗಂಭೀರವಾಗಿ ಗಾಯಗೊಳಿಸಿದ್ದರು. ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ರಾತ್ರಿಯಿಂದ ತೀವ್ರ ಅಸ್ವಸ್ಥರಾದ ಸೈಫಾನ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಸೈಫಾನ್ ಸಾವಿನಿಂದ ಉಳ್ಳಾಲದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೋಲಿಸ್ ಪಡೆಯನ್ನುಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಕೂಡ ಜಾರಿಗೊಳಿಸಲಾಗಿದೆ.


Spread the love
2 Comments
Inline Feedbacks
View all comments
ಹಬೀಬ್ ಖಾದರ್
8 years ago

ಮಿತ್ರರೇ,
ನಿಮ್ಮಲ್ಲೆರ ಕೋಪ,ರೋಷ,ಸಿಟ್ಟು ಇದು ಇವತ್ತು ನಾಳೆ ನಂತರ ಶಾಂತವಾಗುದು ಮತೊಮ್ಮೆಅಮಾಯಕನ ಸತ್ತಾಗ ಇದೇ ತರದ ಮಾತು !ಜಗಳ ಮಾಡುವವರು (3-5%)ನಾವು ಮೂರನೆಯವರು ಹೆಚ್ಚಿರುವುದು ತಿಳಿದಿರಲಿ ನಿಮ್ಮ ಹಾಗೆ ಮಾಡಬೇಕು, ಹೀಗೆ ಮಾಡಬೇಕು, ಅವ ಸರಿ ಇಲ್ಲ, ಅವನ ತಪ್ಪು, ಇವನ ತಪ್ಪು ಇದಕ್ಕಿಂತ ನಾವು ಒಟ್ಟಾದರೆ ಇದಕ್ಕೆ ಲ್ಲ ಬ್ರೇಕ್ ಹಾಕಬಹುದು ಇದ್ದೀರ ನಮ್ ಜೊತೆಗೆ ಉತ್ತರಿಸಿ ಪಂಜಾಬ್ ಬದಲಾಗುವುದಾದರೆ ಉಳ್ಳಾಲ ಯಾಕೆ ಆಗಲ್ಲ
,ಇಮೇಲ್ ಮಾಡಿ habibkhader@yahoo.com ಗೆ

Original R.Pai
8 years ago

Very unfortunate and sad. I appreciate Habib Khader’s positive outlook. It shows how there is always some hope for a better future.