ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೈಬ್ರೀಡ್ ಎಂದು ಕರೆದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ

Spread the love

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೈಬ್ರೀಡ್ ಎಂದು ಕರೆದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ

ಶಿರಸಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೈಬ್ರೀಡ್ ವ್ಯಕ್ತಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಅವರು ಬ್ರಾಹ್ಮಣರಾಗಿದಲ್ಲೀ ಡಿಎನ್ ಎ ಸಾಕ್ಷ್ಯಗಳನ್ನು ನೀಡುವಂತೆ ಅವರು ಕೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅನಂತ್ ಕುಮಾರ್ ಹೆಗ್ಡೆ, ಮುಸ್ಲಿಂ ವ್ಯಕ್ತಿ ರಾಹುಲ್ ಗಾಂಧಿ ತನ್ನಷ್ಟಕ್ಕೆ ತಾನೇ ‘ಜನೆಧರಿ’ ಹಿಂದೂ ಅಂತಾ ಕರೆದುಕೊಂಡಿದ್ದಾರೆ. ಅವರು ಹಿಂದು ಆಗಿದಲ್ಲಿ ಏನಾದರೂ ಸಾಕ್ಷ್ಯ ಇದೆಯಾ? ಮುಸ್ಲಿಂರಿಗೆ ಹುಟ್ಟಿರುವ ರಾಹುಲ್ ಗಾಂಧಿ ತಾಯಿ ಕ್ರಿಶ್ಚಿಯನ್, ಇದರ ಬಗ್ಗೆ ಏನ್ನಾದರೂ ಸಾಕ್ಷ್ಯ ಇದೆಯಾ? ನಾನೂ ಹಾಸ್ಯ ಮಾಡುತ್ತಿಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಮುಸ್ಲಿಂ ಎಂದು ಕರೆದುಕೊಳ್ಳುತ್ತಿದ್ದರು.ಅವರ ತಂದೆ ಪಿರೂಜ್ ಗಾಂಧಿ ಗುಜರಾತಿನ ಪಾರ್ಸಿಯಾಗಿದ್ದರು ಎಂದು ಹೆಗ್ಡೆ ವಿವರಣೆ ನೀಡಿದ್ದಾರೆ.

ಕಳೆದ ವರ್ಷ ನವಂಬರ್ ತಿಂಗಳಲ್ಲಿ ರಾಜಸ್ತಾನದ ಪುಸ್ಕರ್ ಬಳಿಯ ಪ್ರಸಿದ್ಧ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲಿ ತನ್ನ ಗೋತ್ರಾ ಕಾಶ್ಮೀರಿ ಕೌಲ್ ಬ್ರಾಹ್ಮಿಣ ಎಂದು ದೇವಾಲಯದ ಪೂಜಾರಿಗೆ ತಿಳಿಸಿದ್ದರು.

2017ರ ಗುಜರಾತ್ ಆಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಆಗಾಗ್ಗೆ ದೇವಾಲಯಗಳಿಗೆ ತೆರಳುತ್ತಿದ್ದ ರಾಹುಲ್ ಗಾಂಧಿ, ತಾನೂ ಹಿಂದೂ ಮಾತ್ರವಲ್ಲ, ಜನೆದರಿ ಹಿಂದೂ ಎಂದು ಹೇಳಿಕೆ ನೀಡಿದ್ದರು.

ಭಾರತೀಯ ವಾಯುಪಡೆ ದಾಳಿ ಕುರಿತಂತೆ ಸಾಕ್ಷ್ಯ ಕೇಳಿರುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗ್ಡೆ, ರಾಜೀವ್ ಗಾಂಧಿ ಹತ್ಯೆಯಾದ ನಂತರ ದೇಹದ ಭಾಗಗಳ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಆಗ ಪ್ರಿಯಾಂಕಾ ಗಾಂಧಿ ಅವರ ಸ್ಯಾಂಪಲ್ ತೆಗೆದುಕೊಳ್ಳಲು ಸೋನಿಯಾ ಗಾಂಧಿ ಹೇಳಿದ್ದರು ಆದರೆ, ರಾಹುಲ್ ಗಾಂಧಿ ಸ್ಯಾಂಪಲ್ ತೆಗೆದುಕೊಳ್ಳಲು ಹೇಳಿರಲಿಲ್ಲ. ಇದು ಅವರ ದಾಖಲೆಯಾಗಿದೆ ಎಂದು ಕಿಡಿಕಾರಿದರು.

ಈ ಹೈಬ್ರಿಡ್ ವ್ಯಕ್ತಿ ಈಗ ಭಾರತೀಯ ವಾಯುಪಡೆಯ ಸಾಕ್ಷ್ಯ ಕೇಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಚಾರಿತ್ರ್ಯವಾಗಿದ್ದು, ಈ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲು ಭಾರತೀಯರು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ


Spread the love