ಐ.ಎಸ್.ಪಿ.ಆರ್.ಎಲ್. ಸಂತ್ರಸ್ಥರಿಗೆ 1.28 ಕೋಟಿ ಪರಿಹಾರ ವಿತರಣೆ

Spread the love

ಐ.ಎಸ್.ಪಿ.ಆರ್.ಎಲ್. ಸಂತ್ರಸ್ಥರಿಗೆ 1.28 ಕೋಟಿ ಪರಿಹಾರ ವಿತರಣೆ

ಉಡುಪಿ: ಪಾದೂರು ISPRL ಪೈಪ್ ಲೈನ್ ಅಳವಡಿಸುವಾಗ ಬಂಡೆ ಸ್ಪೋಟದಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಕೇಂದ್ರ ಸರ್ಕಾರದಿಂದ ನೀಡಿರುವ 1.28 ಕೋಟಿ ರೂ ಗಳ ಹೆಚ್ಚುವರಿ ಪರಿಹಾರವನ್ನು 120 ಮಂದಿ ಸಂತ್ರಸ್ಥರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಸೋಮವಾರ ಕುಲಶೇಖರ ಸಭಾಭವನ ಕಳತ್ತೂರು ನಲ್ಲಿ ಕಾರ್ಯಕ್ರಮದಲ್ಲಿ ವಿತರಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ, ಶೀಲಾ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ , ತಹಸೀಲ್ದಾರ್ ಮೊಹಮದ್ ಇಸಾಕ್ ಮೊಂತಾದವರು ಉಪಸ್ಥಿತರಿದ್ದರು.


Spread the love