ಕರ್ನಾಟಕ ಕೇಸರಿಯಲ್ಲ, ವರ್ಣರಂಜಿತವಾಗಲಿದೆ: ಪ್ರಕಾಶ್ ರೈ ಟ್ವೀಟ್

Spread the love

ಕರ್ನಾಟಕ ಕೇಸರಿಯಲ್ಲ, ವರ್ಣರಂಜಿತವಾಗಲಿದೆ: ಪ್ರಕಾಶ್ ರೈ ಟ್ವೀಟ್

ಬೆಂಗಳೂರು: ‘ಕರ್ನಾಟಕ ಕೇಸರಿಯಾಗುವುದಿಲ್ಲ… ಆದರೆ, ವರ್ಣರಂಜಿತವಾಗಲಿದೆ’ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ವಿಶ್ವಾಸಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಗ್ಗೆ ವ್ಯಂಗ್ಯವಾಡಿರುವ ಅವರು, ‘ಆರಂಭವಾಗುವುದಕ್ಕೂ ಮುನ್ನವೇ ಪಂದ್ಯ ಮುಕ್ತಾಯವಾಗಿದೆ. 56 ಅನ್ನು ಮರೆತುಬಿಡಿ, 55 ಗಂಟೆಗಳ ಕಾಲವೂ ಉಳಿಸಲಾಗಿಲ್ಲ. ತಮಾಷೆಯನ್ನು ಬದಿಗಿಟ್ಟು ಹೇಳುವುದಾದರೆ, ಹೆಚ್ಚಿನ ರಾಜಕೀಯ ಕೆಸರೆರಚಾಟ ನೋಡಲು ಪ್ರಿಯ ನಾಗರಿಕರು ಸಿದ್ಧರಾಗಿರಿ. ನಾಗರಿಕರ ಪರವಾದ ನಿಲುವನ್ನು ಹಾಗೂ #justasking ಮುಂದುವರಿಸಲಿದ್ದೇನೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ರೆಸಾರ್ಟ್ ರಾಜಕಾರಣವನ್ನು ಟೀಕಿಸಿ ಅವರು ಟ್ವೀಟ್ ಮಾಡಿದ್ದರು. ಅಲ್ಲದೆ, ‘ಏನು ಮಾಡೋಣ’ ಅಭಿಯಾನವನ್ನು ಆರಂಭಿಸಿದ್ದರು.


Spread the love
1 Comment
Mahesh
8 years ago

Vote haako dina elli hogiddipa ??