ಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ

Spread the love

ಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಆಯ್ಕೆ

ಅರಬ್ ಸಂಯುಕ್ತ ಸಂಸ್ಥಾನದಲ್ಲಿಕಾರ್ಯೊನ್ಮುಖವಾಗಿರುವಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿಕರ್ನಾಟಕ ಸಂಘ ಶಾರ್ಜಾಎರಡು ದಶಕಗಳನ್ನು ಪೂರ್ತಿಗೊಳಿಸಿ, ಇಪ್ಪತ್ತೊಂದನೆಯ ವರ್ಷದತ್ತ ಮುನ್ನಡೆಯುತ್ತಿದೆ. 2023 ಮಾರ್ಚ್11ನೇ ತಾರೀಕಿನಂದುಸಂಜೆದುಬಾಯಿ ಫಾರ್ಚೂನ್‍ಅಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ಶಾರ್ಜಾಕರ್ನಾಟಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಕರ್ನಾಟಕ ಸಂಘ ಶಾರ್ಜಾದ12ನೇ ಅಧ್ಯಕ್ಷರಾಗಿ ಸತೀಶ್ ಪೂಜಾರಿಯವರುಎರಡನೆಯ ಬಾರಿಗೆ ಸರ್ವಾನುಮತದಿಂದಆಯ್ಕೆಯಾಗಿದ್ದಾರೆ. ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಪ್ರಾರ್ಥನೆ, ಸ್ವಾಗತದೊಂದಿಗೆ ಪ್ರಾರಂಭವಾಗಿ ಪೋಷಕರಾದ ಮಾರ್ಕ ಡೆನಿಸ್ ಡಿ’ಸೋಜಾಎರಡು ದಶಕಗಳು ನಡೆದುಬಂದ ಹಾದಿಯ ಸಾಧನೆಗಳ ಸಂಪೂರ್ಣ ಮಾಹಿತಿಯನ್ನು ಸಭೆಯ ಮುಂದಿಟ್ಟರು.

ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿಯವರು ವಾರ್ಷಿಕ ವರದಿವಾಚಿಸಿ ಅನುಮೋದನೆಯನ್ನು ಪಡೆದುಕೊಂಡರು. ಖಜಾಂಚಿ ಮಹ್ಮದ್‍ಅಬ್ರಾರ್‍ರವರುಅಯ ವ್ಯಯ ಲೆಕ್ಕ ಪತ್ರವನ್ನು ಮಂಡಿಸಿ ಸರ್ವ ಸದಸ್ಯರಅನುಮತಿಯನ್ನು ಪಡೆದುಕೊಂಡರು.

ಉಪಾಧ್ಯಕ್ಷರಾದ  ನೋಯಲ್‍ಅಲ್ಮೆಡಾರವರು ತಮ್ಮಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಯಶಸ್ಸಿನ ಹಿಂದಿನ ರುವಾರಿಗಳ ಸಾಧನೆಗಳನ್ನು ಶ್ಲಾಘಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಧ್ಯಕ್ಷರಾದ ಮಹ್ಮದ್ ಇಬ್ರಾಹಿಂ ಮೂಳೂರ್ ರವರು ತಮ್ಮ ಅಧಿಕಾರದ ಅವಧಿಯಲ್ಲಿ ಅನಿರೀಕ್ಷಿತ ಕೊರೋನದ ಕಷ್ಟಕರ ದಿನಗಳು ಎದುರಾಗಿದ್ದು ಮಂಗಳೂರಿನಲ್ಲಿ ಸಂಕಷ್ಟದಲ್ಲಿದ್ದ ಹಲವಾರು ಕುಟುಂಬಗಳಿಗೆ ಮತ್ತು ಮಧ್ಯ ಕರ್ನಾಟಕದ ಅಮೀನಗಡದಲ್ಲಿ ಸಹ ಹೆಚ್ಚಿನ ಕುಟುಬದವರಿಗೆ ಸಹಾಯ ಹಸ್ತ ನೀಡಿರುವುದು, ಉಡುಪಿ ಜಿಲ್ಲಾಧಿಕಾರಿಗಳ ಸಂತಸ್ತ್ರ ನಿಧಿಗೆ ಒಂದು ಲಕ್ಷ ದೇಣಿಗೆಯನ್ನು ನೀಡಿರುವುದು, ರಕ್ತದಾನ ಶಿಬಿರ, ಕ್ರೀಡಾಕೂಟ, ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರಧಾನ, ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುವಲ್ಲಿ ಸಹಕಾರ ನೀಡಿರುವ ಸರ್ವರನ್ನು ಸ್ಮರಿಸಿಕೊಂಡು ಕೃತಜ್ಞತೆಗಳನ್ನು ಸಲ್ಲಿಸಿ ತಮ್ಮ ಅಧಿಕಾರವನ್ನು ಹಸ್ತಾಂರಿಸುವ ಮುನ್ನ ವಿದಾಯ ಭಾಷಣ ಮಾಡಿದರು.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಚುನಾವಣಾ ಅಧಿಕಾರೈಯಾಗಿ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್‍ರೈ ಯವರು 2023-2024ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಹೆಸರುಗಳನ್ನು ಘೋಷಿಸಿ ವೇದಿಕೆಗೆ ಬರಮಾಡಿಕೊಂಡರು. ಪೋಷಕರಾದ  ಮಾರ್ಕ್‍ ಡೆನಿಸ್ ಡಿ’ಸೋಜಾರವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿದಿ ವಿಧಾನಗಳನ್ನು ಬೋಧಿಸಿದರು.

ಅಧ್ಯಕ್ಷರಾಗಿಅಧಿಕಾರ ಸ್ವೀಕರಿಸಿದ ಸತೀಶ್ ಪೂಜಾರಿಯವರುತಮ್ಮನುಆಯ್ಕೆ ಮಾಡಿದವರಿಗೆ ಕೃತಜ್ಞತೆಗಳ್ಲು ಸಲ್ಲಿಸಿ, ಮುಂಬರುವ ದಿನಗಳಲ್ಲಿ ಸಂಘಟನೆಯನ್ನುಇನ್ನಷ್ಟು ಬಲಿಷ್ಠಗೊಳಿಸಿ ಯಶಸ್ವಿ ಪಥದಲ್ಲಿಮುನ್ನಡೆಸುವ ಅಸ್ವಾಸನೆಯನ್ನು ನೀಡಿದರು. ನೂತನ ಸಮಿತಿಗೆ ಪೂರ್ವ ಅಧ್ಯಕ್ಷರುಗಳಾದ ಶ್ರೀಯುತರುಗಳಾದ ಆನಂದ್ ಬೈಲೂರ್, ಪ್ರಭಾಕರ ಅಂಬಲ್ತೆರೆ, ಎಂ.ಇ. ಮೂಳೂರು ಹಾಗೂ ಬಿ. ಕೆ. ಗಣೇಶ್‍ರೈಯವರು ಕಾರ್ಯಕ್ರಮ ನಿರೂಪಣೆಯ ಜವಬ್ಧಾರಿಯೊಂದಿಗೆ ಶುಭವನ್ನು ಹಾರೈಸಿದರು.

ಕರ್ನಾಟಕ ಸಂಘ ಶಾರ್ಜಾದ ನೂತನ ಪ್ರಧಾನ ಕಾರ್ಯದರ್ಶಿ ವಿಘ್ನೇಶ್‍ ಕುಂದಾಪುರ ಸರ್ವರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು.


Spread the love

Leave a Reply

Please enter your comment!
Please enter your name here