ಕಾಂಗ್ರೆಸ್‌ಗೂ ಸಿದ್ಧಾಂತವಿದೆ, ಜೈಬಾಪು, ಜೈ ಭೀಮ್, ಜೈ ಸಂವಿಧಾನ್: ವಿನಯ ಕುಮಾರ್ ಸೊರಕೆ

Spread the love

ಕಾಂಗ್ರೆಸ್‌ಗೂ ಸಿದ್ಧಾಂತವಿದೆ, ಜೈಬಾಪು, ಜೈ ಭೀಮ್, ಜೈ ಸಂವಿಧಾನ್: ವಿನಯ ಕುಮಾರ್ ಸೊರಕೆ

ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್‌ ಗೂ ಒಂದು ಸಿದ್ಧಾಂತವಿದೆ. ನಮಗೆ ಸಂವಿಧಾನವೇ ಸಿದ್ಧಾಂತ. ಅಂಬೇಡ್ಕರ್ ಸಂವಿಧಾನವನ್ನು ಇಟ್ಟುಕೊಂಡು ಯುವಜಜನತೆಗೆ ಉತ್ತೇಜನ ನೀಡುವ ಸಲುವಾಗಿ ಕಾಂಗ್ರೆಸ್‌ನ ಪ್ರಚಾರ ಸಮಿತಿಯನ್ನು ಸಕ್ರಿಯಗೊಳಿಸಿ ಬೂತ್ ಮಟ್ಟದವರೆಗೂ, ಜೈಬಾಪು, ಜೈ ಭೀಮ್, ಜೈ ಸಂವಿಧಾನ್ ಮೂಲಕ ಪ್ರಚಾರ ಕಾಂಗ್ರೆಸ್ ತತ್ವ, ನೀತಿಯನ್ನು ಮನೆಮನೆಗೂ ತಲುಪಿಸಲಾಗುತ್ತದೆ ಎಂದು ಪ್ರಚಾರ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಂಸದ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪ್ರಚಾರ ಸಮಿತಿ ಕೇವಲ ಚುನಾವಣೆಗೆ ಮಾತ್ರ ಸೀಮತವಾಗಿರದೆ ದಿನನಿತ್ಯ ಚಟುವಟಿಕೆ ನಡೆಸಲು ಎಐಸಿಸಿ ಅನುಮೋದನೆ ನೀಡಿದೆ. ವರ್ಷ 365 ದಿನಗಳೂ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಬೂತ್ ಮಟ್ಟದ ಜನರೊಂದಿಗೆ ಸಂಪರ್ಕ ಸಾಧಿಸುತ್ತೇವೆ. ಈಗಾಗಲೇ ನಾನು 29 ಜಿಲ್ಲೆಗೆ ಭೇಟಿ ನೀಡಿದ್ದೇನೆ. ಪ್ರಚಾರ ಸಮಿತಿ ಸಂಘಟನೆಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಿ, ಬೂತ್‌ನಿಂದ ಜಿಲ್ಲಾಮಟ್ಟದ ತನಕ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.. ಪ್ರತೀ ಬೂತಿಗೆ ಎರಡು ಕೋರ್ಡಿನೇಟರ್ ನೇಮಕ ಮಾಡಲಾಗುವುದು ಎಂದು ಸೊರಕೆ ಹೇಳಿದರು.

ಇದೊಂದು ನಮ್ಮ ಮಟ್ಟಿಗೆ ದೊಡ್ಡ ಮಟ್ಟದ ಸವಾಲು. ರಾಜ್ಯದ 38 ಸಾವಿರ ಬೂತ್‌ಗಳಲ್ಲಿ 1 ಲಕ್ಷ ಕಾರ್ಯತ್ರರನ್ನು ಜೋಡಿಸಿ ತರಬೇತಿ ನೀಡಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಜನರಿಗೆ ಪರಿಚಯ ಮಾಡಲಾಗುತ್ತದೆ. ಈ ಬಗ್ಗೆ ಬೀದಿನಾಟಕ, ಗ್ಯಾರಂಟಿ ರಥ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ಬಿಜೆಪಿ ಮುಖಂಡರನ್ನು ಟೀಕಿಸಿದ ಅವರು ಗ್ಯಾರಂಟಿ ಯೋಜನಗಳಿಂದ ಸರ್ಕಾರ ದಿವಾಳಿ ಆಗಲಿದ್ದು, ಅದೊಂದು ಬಿಟ್ಟಿ ಗ್ಯಾರಂಟಿ ಎಂದು ಸಾಕಷ್ಟು ಟ್ರೋಲ್ ಮಾಡಿದ್ದರು. ಆದರೆ 58 ಸಾವಿರ ಕೋಟಿ ನೇರ ಖಾತೆಗೆ ಹೋಗುತ್ತಿದೆ. 18000 ಹಣ ಕೋಟಿ ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಮೂಲಕ ಹೋಗುತ್ತಿದೆ., 20 ಸಾವಿರ ಕೋಟಿ ಹಣ ಮಾಸಾಶನ, 4 ಲಕ್ಷ ಕೋಟಿಯ 9 ಕೋಟಿ ಹಣದಲ್ಲಿ 1ಲಕ್ಷ ಕೋಟಿ ಹಣ ಬಡವ ಖಾತೆಗೆ ನೇರವಾಗಿ ಹೋಗುತ್ತದೆ. ತಲಾ ಆದಾಯದಲ್ಲಿ ದೇಶದಲ್ಲಿ ರಾಜ್ಯವೇ ಫಸ್ಟ್ ಎಂದರು.

ಮತಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಅಭಿಯಾನ ನಡೆಸಿದ್ದರಿಂದ ಮತದಾರರ ಪಟ್ಟಿಯಿಂದ ನಕಲಿ ಮತದಾರರ ಹೆಸರನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಮಹಾದೇವಪುರದಲ್ಲಿ 1ಲಕ್ಷ 80 ಸಾವಿರದಷ್ಟು ಹೆಚ್ಚು ಮತ ಬಂದಿದ್ದು, ಹೀಗಾಗಿ ಅಲ್ಲಿ ಕಾಂಗ್ರೆಸ್ ಸೋಲಬೇಕಾಯಿತು. ಬಿಹಾರದಲ್ಲಿ 65 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಸೋಲಾಪುರದಲ್ಲಿ ಅಮಿತ್ ಶಾ 21 ಲಕ್ಷ ಓಟು ಸೇರಿಸಿದ್ದಾರೆ ಎಂದು ಆರೋಪಿಸಿದರು. ಮತದಾರರ ಪಟ್ಟಿ ಸರಿಪಡಿಸಲು ರಾಹುಲ್ ಯಾತ್ರೆ ಮಾಡಬೇಕಾಯಿತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಹಿರಿಯರಾದ ಕೋಡಿಜಾಲ್ ಇಬ್ರಾಹಿಂ, ಮಾಜಿ ಶಾಸಕ ಜೆ.ಆರ್. ಲೋಬೊ, ಮುಖಂಡರಾದ ಸುಧೀರ್ ಕುಮಾರ್ ಮರೋಳಿ, ಅಬ್ದುಲ್‌ಮುನೀರ್, ಶುಭೋದಯ ಆಳ್ವ, ಸತೀಶ್ ಕಾಶಿಪಟ್ಟ, ಭರತೇಶ್ ಅಮಿನ್, ಟಿ.ಕೆ. ಸುಧೀರ್, ಡೇಮಿಸ್ ಡಿಸಿಲ್ವ, ಆದರ್ಶ ಎಲ್ಲಪ್ಪ ಮತ್ತಿತರರಿದ್ದರು.


Spread the love
Subscribe
Notify of

0 Comments
Inline Feedbacks
View all comments