ಕಾಣೆಯಾದ ವ್ಯಕ್ತಿಯ ಶವ ನೇತ್ರಾವತಿ ನದಿಯ ಡ್ಯಾಂನಲ್ಲಿ ಪತ್ತೆ

124
Spread the love

ಕಾಣೆಯಾದ ವ್ಯಕ್ತಿಯ ಶವ ನೇತ್ರಾವತಿ ನದಿಯ ಡ್ಯಾಂನಲ್ಲಿ ಪತ್ತೆ

ಮಂಗಳೂರು: ಕಳೆದ ಎಂಡು ದಿನಗಳಿಂದ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜಿರ ಮನೆ ನಿವಾಸಿ ರಮೇಶ್ (45) ಎಂಬವರ ಶವ ಬಂಟ್ವಾಳದ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಜೂನ್ 3ರಂದು ರಮೇಶ್ ಅವರ ಪತ್ನಿ ಉಷಾ ಅವರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಆಕೆ ಪತಿ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ ಸಮಯದಲ್ಲಿ ರಮೇಶ್ ಸರಿಯಾಗಿ ನಿದ್ರೆ ಮಾಡದೆ ಮನೆಯ ಹೊರಗಡೆ ಯಾರೋ ಮಾತನಾಡುವ ಶಬ್ದ ಕೇಳುತ್ತಿದ್ದು ನಾನು ಹೋಗಿ ನೋಡಿ ಬರುತ್ತೇನೆ ಎಂದು ಹೋಗಿದ್ದು, ಬೆಳಗಿನ ಜಾವ ಸುಮಾರು 4 ಗಂಟೆಗೆ ಹೊರಗೆ ಹೋಗಿದ್ದು ವಾಪಾಸು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದಂತೆ ಕಾಣೆ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಹುಡುಕಾಟ ಆರಂಭಿಸಿದ ಪೋಲಿಸರಿಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಭೂರು ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ನೇತ್ರಾವತಿ ಡ್ಯಾಮಿನಲ್ಲಿ ಕಾಣೆಯಾದ ವ್ಯಕ್ತಿ ರಮೇಶ್ ಅವರ ಮೃತ ದೇಹ ಪತ್ತೆಯಾಗಿದ್ದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಯುಡಿಆರ್ ನಂ: 20/2018 ಕಲಂ:174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ

ಮೇಲ್ನೋಟಕ್ಕೆ ಯಾವುದೇ ಗಾಯ ಕಂಡು ಬಂದಿರುವುದಿಲ್ಲ. ಈ ಸಂಬಂಧ ಕೆಲವು ಮಾಧ್ಯಮಗಳಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಲಾಗಿರುತ್ತದೆ.ಆದರೆ ಈ ವರೆಗಿನ ತನಿಖೆಯಲ್ಲಿ ಆ ರೀತಿ ಆಂಶಗಳು ಕಂಡು ಬಂದಿರುವುದಿಲ್ಲ. ತನಿಖೆ ಮುಂದುವರಿದಿರುತ್ತದೆ.


Spread the love