ಕಾಪು: ಮಟ್ಟು ಬೀಚ್‌ ನಲ್ಲಿ ಮಣಿಪಾಲ ವಿದ್ಯಾರ್ಥಿ ಸಮುದ್ರಪಾಲು

Spread the love

ಕಾಪು: ಮಟ್ಟು ಬೀಚ್‌ ನಲ್ಲಿ ಮಣಿಪಾಲ ವಿದ್ಯಾರ್ಥಿ ಸಮುದ್ರಪಾಲು

ಕಾಪು: ಕಟಪಾಡಿ ಸಮೀಪದ ಮಟ್ಟು ಬೀಚ್‌ನಲ್ಲಿ ಈಜಾಡಲು ಬಂದಿದ್ದ ಮಣಿಪಾಲ ಕಾಲೇಜಿನ ವಿದ್ಯಾರ್ಥಿ ಸಮುದ್ರದ ಅಲೆಗಳಿಗೆ ಸಿಲುಕಿ ಮೃತಪಟ್ಟು ದುರ್ಘಟನೆ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಮಣಿಪಾಲ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳು ಇಂದು ಮಧ್ಯಾಹ್ನ ಮಟ್ಟು ಬೀಚ್‌ಗೆ ಭೇಟಿ ನೀಡಿ ಸಮುದ್ರದಲ್ಲಿ ಈಜಾಡುತ್ತಿದ್ದರು. ಸ್ಥಳೀಯರು ಅಪಾಯದ ಬಗ್ಗೆ ಎಚ್ಚರಿಸಿದ್ದರೂ, ವಿದ್ಯಾರ್ಥಿಗಳು ಎಚ್ಚರಿಕೆ ಲೆಕ್ಕಿಸದೆ ಸಮುದ್ರಕ್ಕೆ ಇಳಿದಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಪ್ರದೇಶ ಮೂಲದ ವಿದ್ಯಾರ್ಥಿ ವೀರು ರುಲ್ಕರ್ (18) ಅಲೆಗಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ಬಳಿಕ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಮೃತದೇಹ ಸಮೀಪದಲ್ಲೇ ಪತ್ತೆಯಾಗಿದೆ.

ಘಟನೆಯ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love