ಕಾಪು: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ – ಒರ್ವ ವಶಕ್ಕೆ
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಕಾಪು ಪೊಲೀಸರು ವ್ಯಕ್ತಿಯೋರ್ವನನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ವ್ಯಕ್ತಿಯನ್ನು ಗುಂಡಿಬೈಲು ದೊಡ್ಡಣ್ಣಗುಡ್ಡೆ ನಿವಾಸಿ ಅತೀಷ್ (24) ಎಂದು ಗುರುತಿಸಲಾಗಿದೆ.
ಶುಕ್ರವಾರ ಕಾಪು ಠಾಣಾ ಪಿಎಸ್ ಐ ರಾಜ್ ಶೇಖರ್ ಸಾಗನೂರು ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ಬಸ್ ನಿಲ್ದಾಣದ ಬಳಿ ಒರ್ವ ವ್ಯಕ್ತಿಯು ಅಮಲು ಪದಾರ್ಥ ಸೇವನೆ ಮಾಡುತ್ತೀರುವುದಾಗಿ ಬಂದ ಮಾಹಿತಿಯಂತೆ ಸಿಬ್ಬಂದಿಗಳಾದ ಪಿಸಿ ಅರಣ್ ಕುಮಾರ್ ಹಾಗೂ ಶಿವಾನಂದಪ್ಪ ರವರೊಂದಿಗೆ ಸ್ಥಳಕ್ಕೆ ಹೋಗಿದ್ದು ಓರ್ವ ವ್ಯಕ್ತಿ ಅಮಲಿನಲ್ಲಿರುವುದು ಕಂಡು ಅವನ ಬಳಿ ಹೋಗಿ ಅವನ ಹೆಸರು ಕೇಳಿದಾಗ ತೊದಲುತ್ತಾ ಆತೀಷ್ ಎಂದು ಹೇಳಿದ್ದು. ಅವನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ವಶಕ್ಕೆ ಪಡೆದು ವೈದ್ಯರ ಮುಂದೆ ಹಾಜರು ಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢವಾಗಿದೆ.
ಅತೀಷ್ ವಿರುದ್ದ ಕಾಪು ಠಾಣೆಯಲ್ಲಿ ಕಲಂ 27(ಬಿ) ಎನ್.ಡಿ.ಪಿ.ಎಸ್. ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.













