ಕಾರವಾರ ನಗರಸಭೆಯ ಆಯುಕ್ತರಾಗಿ ಎಸ್ ಯೋಗೇಶ್ವರ್ ವರ್ಗಾವಣೆ

Spread the love

ಕಾರವಾರ ನಗರಸಭೆಯ ಆಯುಕ್ತರಾಗಿ ಎಸ್ ಯೋಗೇಶ್ವರ್ ವರ್ಗಾವಣೆ

ಉಡುಪಿ : ಉಡುಪಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಎಸ್ ಯೋಗೇಶ್ವರ್ ಇವರನ್ನು ಕಾರವಾರ ನಗರಸಭೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದು, ಏಪ್ರಿಲ್ 1 ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಸದರಿಯವರ ಪ್ರಭಾರವನ್ನು ಮುಂದಿನ ಆದೇಶದವರೆಗೆ ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ನಾಯಕ್ ಇವರಿಗೆ ವಹಿಸಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಎಸ್ ಯೋಗೇಶ್ವರ್ ಇವರು ಪ್ರಭಾರದಲ್ಲಿ ನಿರ್ವಹಿಸುತ್ತಿದ್ದ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರ ಹುದ್ದೆಗೆ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್ ಸಿ ರವಿ ಕೊಟಾರ ಗಸ್ತಿ, ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಜನಾರ್ಧನ್, ನಮೂನೆ 7ಎ ಅರ್ಜಿಗಳ ವಿಚಾರಣಾ ಭೂ ನ್ಯಾಯ ಮಂಡಳಿ ಹುದ್ದೆಗೆ ಉಡುಪಿ ಭೂನ್ಯಾಯ ಮಂಡಳಿಯ ವಿಶೇಷ ಸಹಾಯಕ ಆಯುಕ್ತರಾದ ರವಿಕುಮಾರ್ ಅಧಿಕಾರ ವಹಿಸಲಿರುವರು.


Spread the love