ಕಾರ್ಕಳದ ವಿವಿಧ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಿದ ಪ್ರಮೋದ್ ಮಧ್ವರಾಜ್

ಕಾರ್ಕಳದ ವಿವಿಧ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಿದ ಪ್ರಮೋದ್ ಮಧ್ವರಾಜ್

ಕಾರ್ಕಳ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿಯಾದ  ಪ್ರಮೊದ್ ಮಧ್ವರಾಜ್ರವರು ಶುಕ್ರವಾರ ಕಾರ್ಕಳ ಹಾಗೂ ಹೆಬ್ರಿಯ ವಿವಿಧ ಗೇರು ಬೀಜ ಹಾಗೂ ಇತರ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಶುಕ್ರವಾರ ಬೆಳಗಿನಿಂದ ಕಾರ್ಕಳದ ಶ್ರೀ ವಿನಾಯಕ ಎಕ್ಸ್ ಪೋರ್ಟ್ಸ್, ಚಾರ ಹೆಬ್ರಿ, ಗಜಾನನ ಗೇರು ಬೀಜ ಫ್ಯಾಕ್ಟರಿ, ವಿನಾಯಕ ಅಗ್ರೋ ಪ್ರೊಡಕ್ಟ್ಸ್, ಹೆಬ್ರಿ ಅನಿತಾ ಕ್ಯಾಶ್ಯು ಫ್ಯಾಕ್ಟರಿ, ರೈತ ಸೇವಾ ಗ್ರಾಮೋದ್ಯೋಗ ಲಕ್ಷ್ಮೀನಾರಾಯಣ ಫ್ಯಾಕ್ಟರಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರಲ್ಲದೆ ಈ ಬಾರಿ ತನ್ನನ್ನು ಬೆಂಬಲಿಸುವಂತೆ ವಿನಂತಿಸಿದರು.

ಪ್ರಮೋದ್ ಅವರೊಂದಿಗೆ ಮಾಜಿ ಶಾಸಕರಾದ   ಗೋಪಾಲ ಭಂಡಾರಿ, ನೀರೆ ಕೃಷ್ಣ ಶೆಟ್ಟಿ ಮತ್ತು ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.