ಕುಂದಾಪುರ: ಫ್ಲೈ ಓವರ್ ಕಾಮಗಾರಿ – ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ
ಉಡುಪಿ: ಕುಂದಾಪುರ ತಾಲೂಕು ಶಾಸ್ತ್ರೀ ಸರ್ಕಲ್ನಲ್ಲಿ ಫ್ಲೈ ಓವರ್ ಕಾಮಗಾರಿ ಸಂಬಂಧ, ಸದ್ರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಂಚಾರದ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.
ಕುಂದಾಪುರದಿಂದ ಉಡುಪಿ, ಮಂಗಳೂರು ಕಡೆಗೆ ಹೋಗುವ ವಾಹನಗಳು ಫ್ಲೈ ಓವರ್ ಅಡಿ ಭಾಗದಿಂದ ಶರೋನ್ ಹೋಟೆಲ್ ಹತ್ತಿರ ಬಲಕ್ಕೆ ತಿರುಗಿ ಸರ್ವೀಸ್ ರಸ್ತೆಯಲ್ಲಿ ಹೋಗುವುದು,
ಉಡುಪಿ ಮತ್ತು ಕುಂದಾಪುರದಿಂದ ಬೈಂದೂರು, ಕೊಲ್ಲೂರು, ಕಾರವಾರ ಕಡೆ ಹೋಗುವ ವಾಹನಗಳು ಜೆ.ಕೆ ಟವರ್ಸ್ ಹತ್ತಿರ ಎಡಕ್ಕೆ ತಿರುಗಿ ಸರ್ವೀಸ್ ರಸ್ತೆಯ ಮೂಲಕ ಹೋಗುವುದು.
ಬೈಂದೂರು, ಕೊಲ್ಲೂರು ಕಡೆಯಿಂದ ಉಡುಪಿ, ಮಂಗಳೂರು ಕಡೆಗೆ ಹೋಗುವ ವಾಹನಗಳು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಎಡಕ್ಕೆ ತಿರುಗಿ ಸರ್ವೀಸ್ ರಸ್ತೆ ಮೂಲಕ ಹೋಗುವುದು ಜೊತೆಗೆ ಕುಂದಾಪುರ ಕಡೆಗೆ ಹೋಗುವವರು ಶರೋನ್ ಹೋಟೆಲ್ ಹತ್ತಿರ ಬಲಕ್ಕೆ ತಿರುಗಿ ಫ್ಲೈ ಓವರ್ ಕೆಳಗಡೆಯಿಂದ ಕುಂದಾಪುರ ಪೇಟೆಗೆ ಹೋಗುವುದು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳ ಸುಗಮ ಸಂಚಾರಕ್ಕಾಗಿ ಹಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹಂಗಳೂರಿನವರೆಗೆ ಸರ್ವೀಸ್ ರಸ್ತೆಗಳಲ್ಲಿ ಏಕಮುಖ ಸಂಚಾರವಾಗಿ ಚಲಿಸುವುದು.
ಸರ್ವಿಸ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













