ಕುಂದಾಪುರ ವಲಯ ಮಟ್ಟದ ಯೋಗಾಸನ ಸ್ಪರ್ಧೆ : ಸರಕಾರಿ ಪ್ರೌಢಶಾಲೆಯ ಐದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ಕುಂದಾಪುರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕುತ್ತೂರ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕುಂದಾಪುರ ವಲಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢ ಶಾಲೆ ಹೆಸ್ಕುತ್ತೂರಿನ ಮೂರು ಬಾಲಕಿಯರು ಹಾಗೂ ಎರಡು ಬಾಲಕರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ರಶ್ಮಿತ 10ನೇ ತರಗತಿ, ಮಾನ್ಯ 8ನೇ ತರಗತಿ, ಅನುಷ್ಕಾ 10ನೇ ತರಗತಿ ಹಾಗೂ 17ರ ಬಾಲಕರ ವಿಭಾಗದಲ್ಲಿ ಪ್ರಥಮ್ ಶೆಟ್ಟಿ 10ನೇ ತರಗತಿ, ಅನ್ವಿತ್ 10ನೇ ತರಗತಿ. ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಅಬ್ದುಲ್ ರವೂಫ್ ಹಾಗೂ ಶಿಕ್ಷಕ ಮತ್ತು. ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದರು ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಜಯಪ್ರಸಾದ್ ಶೆಟ್ಟಿ ಮತ್ತು ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂಜೀವ ರವರು ಮಾರ್ಗದರ್ಶನ ನೀಡಿದ್ದರು.