ಕೊಡಿಯಾಲ್‍ಬೈಲು ವಾರ್ಡಿನಲ್ಲಿ ಮಾಜಿ ಶಾಸಕರಾದ ಲೋಬೊರವರಿಂದ ಮತಯಾಚನೆ

ಕೊಡಿಯಾಲ್‍ಬೈಲು ವಾರ್ಡಿನಲ್ಲಿ ಮಾಜಿ ಶಾಸಕರಾದ ಲೋಬೊರವರಿಂದ ಮತಯಾಚನೆ

ಮಾಜಿ ಶಾಸಕರಾದ ಜೆ.ಆರ್.ಲೋಬೊ ರವರು ಕೊಡಿಯಾಲ್‍ಬೈಲು ವಾರ್ಡಿನ ವ್ಯಾಪ್ತಿಯಲ್ಲಿರುವ ಚಂದ್ರಿಕಾ ಬಡಾವಣೆ, ಬಿಜೈ ಚರ್ಚ್ ಪರಿಸರ, ಭಾರತೀನಗರ, ಕೊಡಿಯಾಲ್‍ಬೈಲ್ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಅಭ್ಯರ್ಥಿಯಾದ ಎಂ.ಮಿಥುನ್‍ರೈ ಅವರ ಪರವಾಗಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್, ಪ್ರೇಮ್‍ನಾಥ ಬಲ್ಲಾಲ್ ಬಾಗ್, ರಘುರಾಜ್ ಕದ್ರಿ, ಮೋಹನ್ ಮೆಂಡನ್, ಅರುಣ್ ಕದ್ರಿ, ಮಮತಾ ಶೆಟ್ಟಿ, ರವಿ ಕದ್ರಿ, ನೆಲ್ಸನ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.