ಕೊರೋನಾ ಹೋರಾಟಕ್ಕೆ ಒಂದು ಕೋಟಿ ರು, ನೆರವು ನೀಡಿದ ಸಂಸದ ಆಸ್ಕರ್ ಫೆರ್ನಾಂಡಿಸ್

ಕೊರೋನಾ ಹೋರಾಟಕ್ಕೆ ಒಂದು ಕೋಟಿ ರು, ನೆರವು ನೀಡಿದ ಸಂಸದ ಆಸ್ಕರ್ ಫೆರ್ನಾಂಡಿಸ್

ಉಡುಪಿ: ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ  ಕೈಗೊಳ್ಳುವ ಅಗತ್ಯ ಸುರಕ್ಷತಾ ಕ್ರಮಗಳಿಗೆ ವಿನಿಯೋಗ ಮಾಡುವ ಸಲುವಾಗಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಸಂಸದರ ಪ್ರದೇಶಾಭಿವೃಉದ್ಧಿ ಯೋಜನೆ ಅನುದಾನದಲ್ಲಿ ರೂ. 1ಕೋಟಿ ಯನ್ನು ಉಡುಪಿ ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಜಾಗತಿಕ ಮಹಾಮಾರಿ ಕೊರೋನಾವೈರಸ್ ರೋಗದ ವಿರುದ್ಧ ಹೋರಾಟಕ್ಕೆ ಇಡೀ ರಾಜ್ಯ ಸಜ್ಜಾಗಿದೆ. ಅದರ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ಸಹ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಸಲುವಾಗಿ ಸಂಸದರು ಸಂಸದರ ನಿಧಿಯಿಂದ ಒಂದು ಕೋಟಿ ನೆರವು ನೀಡುತ್ತಿದ್ದಾರೆ.

ಈ ಹಿಂದೆ ಹಲವಾರು ಸಂಸದರು ತಮ್ಮ ಸಂಸದ ಪ್ರದೇಶಾಭಿವೃದ್ಧಿನಿಧಿಯಿಂದ ಹಣವನ್ನು ಕೊರೋನಾ ವಿರುದ್ಧ ಹೋರಾಟಕ್ಕಾಗಿ ಬಿಡುಗಡೆ ಮಾಡಿದ್ದಾರೆ.

Leave a Reply

  Subscribe  
Notify of