ಕೊರೋನ ವೈರಸ್ ಭೀತಿ; ರಾಜ್ಯ ಸರಕಾರದ ಕಾನೂನು ಪಾಲಿಸಲು ಸುನ್ನಿ ಜಮಾತ್ ಖಾಝಿ ಸೂಚನೆ

ಕೊರೋನ ವೈರಸ್ ಭೀತಿ; ರಾಜ್ಯ ಸರಕಾರದ ಕಾನೂನು ಪಾಲಿಸಲು ಸುನ್ನಿ ಜಮಾತ್ ಖಾಝಿ ಸೂಚನೆ

ಉಡುಪಿ: ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಭೀತಿಯಿಂದ ರಾಜ್ಯ ಸರಕಾರವು ಜಾರಿಗೆ ತಂದಿರುವ ಈ ಕಾನೂನುಗಳನ್ನು ಪಾಲಿಸಬೇಕೆಂದು ಉಡುಪಿ ,ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಪಿ.ಎಮ್ ಇಬ್ರಾಹಿಂ ಮುಸ್ಲಿಯಾರ್ ತಿಳಿಸಿರುವುದಾಗಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ತಿಳಿಸಿದ್ದಾರೆ

ಜನಸಂಖ್ಯೆ ಒಟ್ಟಾಗುವ ಸಮಾರಂಭಗಳನ್ನು ಸಧ್ಯಕ್ಕೆ ಕೈಬಿಡಬೇಕಾಗಿಯೂ ಮಸೀದಿಗಳಲ್ಲಿ ನಡೆಸುವ ನಮಾಝ್ ಮುಂತಾದ ಆರಾಧನೆಗಳನ್ನು ಶೀಘ್ರದಲ್ಲೇ ಮುಗಿಸಬೇಕೆಂದೂ ಸಾರ್ವಜನಿಕರು ಉಪಯೋಗಿಸುವ ಟ್ಯಾಂಕ್ ನೀರನ್ನು ಬಳಸುವುದನ್ನು ನಿಲ್ಲಿಸಿ ನಳ್ಳಿ ನೀರನ್ನು ಬಳಸಿ ಜಾಗರೂಕರಾಗಬೇಕೆಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

  Subscribe  
Notify of