ಕ್ರೀಡೆಯಿಂದ ಮನಃಶಾಂತಿ, ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಕುರಿಯನ್ ಅಭಿಮತ

Spread the love

ಕ್ರೀಡೆಯಿಂದ ಮನಃಶಾಂತಿ, ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಕುರಿಯನ್ ಅಭಿಮತ

ಮೂಡುಬಿದಿರೆ: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡೂ ಉತ್ತಮವಾರುತ್ತದೆ. ಹೀಗಾಗಿ ಕ್ರೀಡೆಯಿಂದ ಮನಃಶಾಂತಿ, ಉಲ್ಲಾಸ ಲಭಿಸುತ್ತದೆ ಎಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೆಟಿಕ್ ತರಬೇತುದಾರ ಕುರಿಯನ್ ಪಿ. ಮ್ಯಾಥಿವ್ ಹೇಳಿದರು.

ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಆರೋಗ್ಯವೇ ಭಾಗ್ಯ ಎಂಬುದು ಕೇವಲ ನುಡಿಯಾಗಿಯೇ ಉಳಿದಿದೆ. ಆದರೆ, ಇದು ತುಂಬ ಕಳವಳಕಾರಿ ವಿಷಯ. ಪ್ರತಿಯೊಬ್ಬರೂ ಆರೋಗ್ಯವಾಗಿ ಇರಬೇಕೆಂದರೆ ದೈಹಿಕ ಚಟುವಟಿಕೆ ಬೇಕು, ಅದಕ್ಕೆ ಕ್ರೀಡೆ ಸಹಾಯ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಪೆÇ್ರ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಕೃಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಕಾಲೇಜಿನ ಕ್ರೀಡಾಪಟುಗಳಾದ ಸೌಮ್ಯಶ್ರೀ, ಅಂಕಿತ, ಚೈತ್ರ ದೇವಾಡಿಗ, ಸೃಷ್ಟಿ, ವಿಷ್ಣು, ಮಹಮ್ಮದ್ ಸಫಾನ್, ಬಸವರಾಜ್ ನೀಲಪ್ಪ ಕ್ರೀಡಾಜ್ಯೋತಿ ಬೆಳಗಿಸಿದರು.

ಬಿ.ಎಸ್.ಸಿ, ಬಿ.ಎಫ್.ಎನ್.ಡಿ ಚಾಂಪಿಯನ್ಸ್
ಕ್ರೀಡಾಕೂಟದ ಓವರ್ ಆಲ್ ಚಾಂಪಿಯನ್‍ಶಿಪ್ ಅಚಿತಿಮ ವರ್ಷದ ಬಿಎಸ್ಸಿ ಹಾಗೂ ಬಿಎಫ್‍ಎನ್‍ಡಿ ಮುಡಿಗೇರಿದೆ. ಪಥಸಂಚಲನದಲ್ಲಿ ಎಕಾಂ ಹಾಗೂ ಎಂಎಚ್ಚೆಆರ್‍ಡಿ ಪ್ರಥಮ ಸ್ಥಾನ ಹಾಗೂ ಬಿಸಿಎ ದ್ವಿತೀಯ ಸ್ಥಾನ ಪಡೆದಿದೆ.

‘ಉತ್ತಮ್’ ಉತ್ತಮ ಕ್ರೀಡಾಪಟು
ತೃತೀಯ ಬಿಎಸ್ಸಿಯ ಉತ್ತಮ್ ಪುರುಷರ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಹಿಳೆಯರ ವಿಭಾಗದ ವೈಯುಕ್ತಿಕ ಚಾಂಪಿಯನ್‍ಶಿಪ್ ಅನ್ನು ದ್ವಿತೀಯ ಬಿಕಾಂನ ಪ್ರತೀಕ್ಷಾ ಎಂ ಹಾಗೂ ದ್ವಿತೀಯ ಎಂಕಾಂನ ಸಹನ ಹಂಚಿಕೊಂಡಿದ್ದಾರೆ.


Spread the love