ಸೇವಾಲಾಲ್ ಜಯಂತಿ ಉತ್ತಮ ಕಾರ್ಯ – ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು

Spread the love

ಸೇವಾಲಾಲ್ ಜಯಂತಿ ಉತ್ತಮ ಕಾರ್ಯ – ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು

ಮಂಗಳೂರು: ಸಂತ ಶ್ರೀ ಸೇವಾಲಾಲ್ ಜಯಂತಿ ಆಚರಿಸುವ ಮೂಲಕ ಬಂಜಾರ ಸಮುದಾಯದ ಉತ್ತಮ ನಾಯಕನನ್ನು ಸ್ಮರಿಸಿ, ಗೌರವಿಸುವ ಕಾರ್ಯ ಸರ್ಕಾರ ಮಾಡುತ್ತಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಹೇಳಿದರು.

ಶನಿವಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ) ದ.ಕ ಇವರ ಸಹಕಾರದೊಂದಿಗೆ ನಡೆದ ಸಂತ ಶ್ರೀ ಸೇವಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಂಜಾರು ಸಮುದಾಯದವರು ಹಿಂದೆ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಇಂದು ಉನ್ನತ ವಿದ್ಯಾಭ್ಯಾಸ ಪಡೆಯುವ ಮೂಲಕ ಸರ್ಕಾರಿ ನೌಕರರಾಗಿ, ಸಚಿವರಾಗಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಬಂಜಾರ ಸಮುದಾಯದ ಬಗ್ಗೆ ಕೀಳರಿಮೆ ಬೇಡ ಎಂದು ಹೇಳಿದರು.

ಬಂಜಾರ (ಲಂಬಾಣಿ) ಸಂಸ್ಕøತಿ ವಿಭಿನ್ನ ಶೈಲಿಯಾಗಿದ್ದು, ಲಂಬಾಣಿ ವೇಷಭೂಷಣ ವಿನೂತನ ಶೈಲಿಯಲ್ಲಿ ಕೂಡಿರುತ್ತದೆ. ಹಾಗಾಗಿ ಪ್ರತೀ ವರ್ಷ ಸಂತ ಶ್ರೀ ಸೇವಾಲಾಲ್ ಜಯಂತಿಯಂದು ಆದಷ್ಟು ಲಂಬಾಣಿ ಸಂಸ್ಕøತಿಯ ವೇಷಭೂಷಣವನ್ನು ತೊಡುವುದು ಉತ್ತಮ. ಈ ಮೂಲಕ ಲಂಬಾಣಿ ಸಂಸ್ಕøತಿಯ ಅನಾವರಣ ಆಗುತ್ತದೆ ಎಂದು ಮುಹಮ್ಮದ್ ಮೋನು ಹೇಳಿದರು.

ಕೆಮ್ರಾಲ್ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ರಮೇಶ್ ಆರ್ ರಾಥೋಡ್ ಉಪನ್ಯಾಸ ನೀಡಿ, ಬಂಜಾರ, ಭಾರತದ ಅತ್ಯಂತ ಪುರಾತನ ಸಂಸ್ಕøತಿಯನ್ನು ಹೊಂದಿದ್ದು, ಸಂತ ಶ್ರೀ ಸೇವಾಲಾಲ್ ಅವರು ಈ ಪುಣ್ಯ ಭೂಮಿಯಲ್ಲಿ ಜನಿಸಿದ್ದು ಹೆಮ್ಮೆಯ ಸಂಗತಿ. ತಮ್ಮ ಸಮುದಾಯದ ಉದ್ದಾರಕ್ಕಾಗಿ ಅವರು ಮಾಡಿದ ಸೇವೆ ಅವಿಸ್ಮರಣೀಯ. ಅನೇಕ ಪವಾಡಗಳನ್ನು ಮಾಡಿದ ಮಹಾನ್ ಸಂತ. ಇವರು ಬಂಜಾರ ಸಮುದಾಯದ ಭಾಂದವರಲ್ಲಿದ್ದ ಅಜ್ಞಾನ, ಮೌಢ್ಯತೆ, ಮೂಢನಂಬಿಕೆ ಮೊದಲಾದ ಸಾಮಾಜಿಕ ಪಿಡುಗನ್ನು ತೊಲಗಿಸಿ ಜನರಲ್ಲಿ ಜ್ಞಾನದ ಅರಿವನ್ನು ಮೂಡಿಸಲು ದಾರಿದೀಪವಾಗಿದ್ದರು. ಸ್ವ ಹಿತಕ್ಕಿಂತ ಪರರ ಹಿತ ಬಯಸಿದವರು ಸಂತ ಶ್ರೀ ಸೇವಾಲಾಲ್‍ರವರು. ಇಂತಹ ಯುಗಪುರಷ ಬಂಜಾರರ ಬಾಳಿನಲ್ಲಿ ದಾರಿದೀಪವಾಗಿ ಜನಾಂಗದ ಅರಾಧ್ಯ ದೈವವಾಗಿದ್ದಾರೆ ಉಪನ್ಯಾಸ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರ, ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ) ಅಧ್ಯಕ್ಷ ಡಾ.ಎ.ಟಿ. ರಾಮಚಂದ್ರ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು.


Spread the love