ಗೋಲ್ಡ್ ಹಾಗೂ ಮೊಬೈಲ್ ಕಳುಹಿಸುವುದಾಗಿ ಮಹಿಳೆಯಿಂದ ಹಣ ಪಡೆದು ವಂಚನೆ

Spread the love

ಗೋಲ್ಡ್ ಹಾಗೂ ಮೊಬೈಲ್ ಕಳುಹಿಸುವುದಾಗಿ ಮಹಿಳೆಯಿಂದ ಹಣ ಪಡೆದು ವಂಚನೆ

ಮಂಗಳೂರು: ಗೋಲ್ಡ್ ಹಾಗೂ ಮೊಬೈಲ್ ಕಳುಹಿಸುವುದಾಗಿ ಹೇಳಿ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ರೂ 21.61 ಲಕ್ಷ ಹಣ ವಂಚಿಸಿದ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

ಮಾರ್ಚ್ 11ರಂದು ಪುತ್ತೂರು ತಾಲೂಕಿನ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಅಪರಿಚಿತ ವ್ಯಕ್ತಿ ಫೇಸ್ಬುಕ್ನಲ್ಲಿ ದೂರುದಾರರ ಮೊಬೈಲ್ ನಂಬ್ರ ಪಡೆದು ವಾಟ್ಸಾಪ್ ಕರೆ ಹಾಗೂ ಮೆಸೇಜ್ ಮಾಡುತ್ತಿದ್ದು, ಅರ್ಜಿದಾರರಿಗೆ ಗೋಲ್ಡ್ ಹಾಗೂ ಮೊಬೈಲ್ ಕಳುಹಿಸುವುದಾಗಿ ಹೇಳಿ ನಂತರ ಅಪರಿಚಿತ ವ್ಯಕ್ತಿಗೆ ಪರಿಚಯವಿರುವ ಒಂದು ಹೆಂಗಸಿನ ಮುಖಾಂತರ ಕರೆ ಮಾಡಿ ನಾವು ಡೆಲ್ಲಿ ಏರ್ಪೋರ್ಟ್ ಅಧಿಕಾರಿ ಎಂದು ಹೇಳಿ ನಿಮಗೆ ಕಳುಹಿಸಿದ ಪಾರ್ಸೆಲ್ಗೆ ರೂ. 26,000/- ಟ್ಯಾಕ್ಸ್ ಆಗುತ್ತದೆ ಹಾಗೂ ನಿಮ್ಮ ಪಾರ್ಸೆಲ್ ಜೊತೆಯಲ್ಲಿ ಯು.ಕೆ. ಪೌಂಡ್ಸ್ ಬಂದಿದ್ದು, ಅದನ್ನು ಇಂಡಿಯನ್ ಕರೆನ್ಸಿಗೆ ಕನ್ವರ್ಟ್ ಮಾಡಲು ಹಣ ಸಂದಾಯ ಮಾಡಬೇಕು ಎಂದು ಹೇಳಿ, ಅದಕ್ಕೆ ಹಣ ಸಂದಾಯ ಮಾಡಲು, ಡೆಲ್ಲಿಯಿಂದ ಮಂಗಳೂರಿಗೆ ಬರಲು ಕ್ಲಿಯರೆನ್ಸ್ಗೋಸ್ಕರ ಹಣ ಸಂದಾಯ ಮಾಡಿ ಎಂಬಿತ್ಯಾದಿ ಬೇಡಿಕೆಯಿಟ್ಟಿದ್ದರಿಂದ ಫಿರ್ಯಾಳದಿದಾರರು ಅವರ ಮೂರು ವಿವಿಧ ಖಾತೆಗಳಿಂದ ಒಟ್ಟು 12 ಸಲ ಅಪರಿಚಿತ ವ್ಯಕ್ತಿ ಕಳುಹಿಸಿದ ಬೇರೇ ಬೇರೇ ಖಾತೆಗೆ ಒಟ್ಟು ಮೊತ್ತ: ರೂ. 21,61,354/- ಹಣವನ್ನು ವರ್ಗಾಯಿಸಿರುತ್ತಾರೆ. ಅಪರಿಚಿತ ವ್ಯಕ್ತಿಯ ಕಡೆಯಿಂದ ಯಾವುದೇ ವಸ್ತು ಬಾರದೇ ಪಿರ್ಯಾಧಿದಾರರಿಗೆ ವಂಚಿಸಿರುವುದಾಗಿದೆ.

ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ದ.ಕ ಜಿಲ್ಲೆ ಮಂಗಳೂರಿನಲ್ಲಿ ಅ.ಕ್ರ. 04/2019 ಕಲಂ: 66 ಸಿ ಮತ್ತು ಡಿ ಐಟಿ ಕಾಯ್ದೆ ಮತ್ತು 420 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.


Spread the love