ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾಗಿ ಕೆ.ಕೆ.ಶಾಹುಲ್ ಹಮೀದ್
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಸಂಘಟನೆಯ ಮಹಾಸಭೆ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಮುದಾಯ ಭವನದಲ್ಲಿ ಜರುಗಿತು.

ಜಮೀಯ್ಯತುಲ್ ಫಲಾಹ್ ಸ್ಥಾಪಕ ಮುಹಮ್ಮದ್ ಇಕ್ಬಾಲ್ ಯೂಸುಫ್, ಎನ್ಆರ್ಸಿಸಿ ಮುಖ್ಯಸ್ಥ ಮನ್ಸೂರ್ ಅಲಿ ಅಹ್ಮದ್, ವೀಕ್ಷಕ ಇಬ್ರಾಹಿಂ ಸಾಹೆಬ್ ಕೋಟ ಉಪಸ್ಥಿತರಿದ್ದರು.
ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ಕೆ.ಶಾಹುಲ್ ಹಮೀದ್ (ಬಂಟ್ವಾಳ ಘಟಕ), ಉಪಾಧ್ಯಕ್ಷರಾಗಿ ಶಬಿ ಅಹ್ಮದ್ ಖಾಝಿ (ಉಡುಪಿ ಘಟಕ) ಹಾಗೂ ಅಬ್ದುಲ್ ಶುಕೂರ್ (ಪುತ್ತೂರು ಘಟಕ), ಪ್ರಧಾನ ಕಾರ್ಯದರ್ಶಿಯಾಗಿ ಸಯ್ಯದ್ ಝುಬೈರ್ ಶಾಹ್ (ಮಂಗಳೂರು ನಗರ ಘಟಕ), ಕೋಶಾಧಿಕಾರಿಯಾಗಿ ಝಮೀರ್ ಅಂಬರ್ (ಮಂಗಳೂರು ನಗರ ಘಟಕ), ಜತೆ ಕಾರ್ಯದರ್ಶಿಯಾಗಿ ಸಲೀಂ ಹಂಡೇಲ್ (ಮೂಡುಬಿದಿರೆ ಘಟಕ), ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎಚ್.ಇಕ್ಬಾಲ್ (ಬಂಟ್ವಾಳ ಘಟಕ), ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಜೈನುದ್ದೀನ್ (ಪುತ್ತೂರು ಘಟಕ) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವೈದ್ಯಕೀಯ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಬ್ಬರಿಗೆ 2.32 ಲಕ್ಷ ರೂ. ಮೊತ್ತದವನ್ನು ಸಂಘಟನೆಯ ದಮಾಮ್ ಘಟಕದ ವತಿಯಿಂದ ಶೈಕ್ಷಣಿಕ ನೆರವು ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಕೆ.ಶಾಹುಲ್ ಹಮೀದ್ ಅವರನ್ನು ಸನ್ಮಾನಿಸಲಾಯಿತು.
ಜಮೀಯತುಲ್ ಫಲಾಹ್ ನಿರ್ಗಮನ ಅಧ್ಯಕ್ಷ ಅಬ್ದುಲ್ ಲತೀಫ್ ಸಾಹೇಬ್ ಸ್ವಾಗತಿಸಿದರು, ಕಾರ್ಯದರ್ಶಿ ಮುಹಮ್ಮದ್ ಶರೀಫ್ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಸಯ್ಯದ್ ಝುಬೈರ್ ಶಾಹ್ ಧನ್ಯವಾದ ಸಲ್ಲಿಸಿದರು. ಮುಹಮ್ಮದ್ ಹನೀಫ್ ಕಾರ್ಯಕ್ರಮ ನಿರ್ವಹಿಸಿದರು.













