ತಾಯಿ, ಮಕ್ಕಳ ಬರ್ಬರ ಕೊಲೆ: ಮನುಷ್ಯತ್ವವನ್ನು ಮರೆಮಾಚುವಂತಹ ಕೃತ್ಯ – ರಮೀಜ್ ಹುಸೇನ್

Spread the love

ತಾಯಿ, ಮಕ್ಕಳ ಬರ್ಬರ ಕೊಲೆ: ಮನುಷ್ಯತ್ವವನ್ನು ಮರೆಮಾಚುವಂತಹ ಕೃತ್ಯ – ರಮೀಜ್ ಹುಸೇನ್

ಉಡುಪಿ: ಜಿಲ್ಲೆಯ ನೇಜಾರುವಿನಲ್ಲಿ ನಡೆದ ಅಮಾನವೀಯ ಕೊಲೆ ಮನುಷ್ಯತ್ವವನ್ನು ಮರೆ ಮಾಚುವಂತಹ ಘಟನೆಯಾಗಿದೆ ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಹೇಳಿದ್ದಾರೆ.

ದೇಶದ ಜನ ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿದ್ದಾಗಲೇ ಬೆಳ್ಳಂಬೆಳಗ್ಗೆ ಒಂದೇ ಮನೆಯ ತಾಯಿ ಹಾಗೂ ಮೂರು ಮಕ್ಕಳನ್ನು ಕೊಂದು ಹಾಕಿರುವುದು ದುಃಖಕರ ವಿಚಾರವಾಗಿದ್ದು ಈ ಘಟನೆಯಿಂದ ಜಿಲ್ಲೆಯ ಜನತೆ ಭಯಭೀತರಾಗುವಂತೆ ಮಾಡಿದೆ. ಈ ಘಟನೆಯಿಂದಾಗಿ ಮನುಷ್ಯನ ಜೀವಕ್ಕೆ ಬೆಲೆ ಇಲ್ಲದ ರೀತಿಯಾಗಿದ್ದು, ಜನತೆ ಭಯದ ವಾತಾವರದಲ್ಲಿ ಬದುಕುವಂತಾಗಿದೆ.

ಜಿಲ್ಲೆಯಲ್ಲಿ ನಡೆದ ಈ ಕೂಲೆ ಎಲ್ಲರನ್ನೂ ನಿಬ್ಬೆರಾಗುವಂತೆ ಮಾಡಿದ್ದು, ತಾಯಿ ಮತ್ತು ಮಕ್ಕಳನ್ನು ಕೊಂದು ಒಡಿಹೋಗಿರುವ ಕೊಲೆಗಾರನನ್ನು ಆದಷ್ಟು ಬೇಗ ಬಂಧಿಸಿ ನ್ಯಾಯಕೊಡಿಸುವ ಕೆಲಸ ನಡೆಯಬೇಕಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಈ ಘಟನೆಯನ್ನು ವಿಶೇಷವಾಗಿ ಪರಿಗಣಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ.

ಘಟನೆ ನಡೆದು ಎರಡು ದಿನ ಕಳೆದರೂ ಆರೋಪಿ ಪತ್ತೆಯಾಗದಿರುವುದರಿಂದ ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕೂಲೆಗಾರನನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯ ಒದಗಿಸುವುದರೊಂದಿಗೆ ಮುಂದೆ ಈ ರೀತಿಯ ಘಟನೆಯ ನಡೆಯದಂತೆ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು ಎಂದು ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.


Spread the love