ತುಳು ವಸ್ತುಸಂಗ್ರಹಾಲಯ ನಾಡಿನ ನಿನ್ನೆಗಳನ್ನು ನಾಳೆಗೆ ತಲುಪಿಸುವ ರಾಯಭಾರಿಗಳು

Spread the love

ತುಳು ವಸ್ತುಸಂಗ್ರಹಾಲಯ ನಾಡಿನ ನಿನ್ನೆಗಳನ್ನು ನಾಳೆಗೆ ತಲುಪಿಸುವ ರಾಯಭಾರಿಗಳು

ಬಂಟ್ವಾಳ: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳದಲ್ಲಿ ‘ಮೌಖಿಕ ಕಥನ ಮತ್ತು ಭೌತಿಕ ವಸ್ತುಗಳು, ಸಾಮಾಜಿಕ ಚರಿತ್ರೆಯ ಪುನರ್‍ರಚನೆ’ ಎಂಬ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವು ಉದ್ಘಾಟನೆಯಾಯಿತು. ಉದ್ಘಾಟಕರಾದ ಡಾ. ನಿರಂಜನ ವಾನಳ್ಳಿಯವರು ತುಳು ಸಂಸ್ಕೃತಿಯ ತೊಟ್ಟಿಲು ಇಲ್ಲಿದೆ ಎಂದು ತುಳು ಬದುಕು ವಸ್ತುಸಂಗ್ರಹಾಲಯವನ್ನು ಉಲ್ಲೇಖಿಸಿ, ಇಲ್ಲಿರುವ ವಸ್ತುಗಳು ನಮ್ಮ ನಾಡಿನ ನಿನ್ನೆಗಳನ್ನು ನಾಳೆಗೆ ತಲುಪಿಸುವ ರಾಯಭಾರಿಗಳು ಎಂದರು. ಹಳ್ಳಿಯೊಂದರಲ್ಲಿ ಬಳಸಲಾಗುವ ವಸ್ತುಗಳ ಆಧಾರದಲ್ಲಿ ಸಾಮಾಜಿಕ ಚರಿತ್ರೆಯನ್ನು ಬರೆಯುವಲ್ಲಿ ಅತಿ ಸಣ್ಣ ವಸ್ತುಗಳೂ ದೊಡ್ಡ ಕೊಡುಗೆ ನೀಡಬಲ್ಲವು- ಎಂದವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂಸ್ಥೆ ಬೆಳೆದು ಬಂದ ರೀತಿಗೆ ಅಚ್ಚರಿ ವ್ಯಕ್ತಪಡಿಸಿದರು. ದಿಕ್ಸೂಚಿ ಭಾಷಣ ಮಾಡಿದ ಡಾ. ಸುರೇಂದ್ರ ರಾವ್ ಅವರು ಚರಿತ್ರೆಯ ನಿಗೂಢತೆಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಕೇಂದ್ರದ ಅಧ್ಯಕ್ಷರು, ಕಾರ್ಯದರ್ಶಿಗಳಾದ ತುಕಾರಾಮ್ ಪೂಜಾರಿ ಮತ್ತು ಡಾ. ಆಶಾಲತಾ ಸುವರ್ಣ ದಂಪತಿಗಳು ಹಾಗೂ ಸಹಸಂಚಾಲಕರಾದ ಶ್ರೀ ಚೇತನ್ ಮುಂಡಾಜೆ, ಉಪಸ್ಥಿತರಿದ್ದರು.
ಹಿರಿಯರಾದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಶ್ರೀ ಎ.ಸಿ.ಭಂಡಾರಿ, ರುಕ್ಮಯ ಪೂಜಾರಿ, ಪೆÇ್ರ. ಪುಂಡಿಕಾಯಿ ಗಣಪಯ್ಯ ಭಟ್, ಡಾ. ಕೆ.ಚಿನ್ನಪ್ಪ ಗೌಡ, ಕುವೆಂಪು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ರಾಜಾರಾಮ್ ಹೆಗಡೆ, ಹೈದರಾಬಾದ್ ಸಾಲಾರ್‍ಜಂಗ್ ಮ್ಯೂಸಿಯಂನ ಕ್ಯುರೇಟರ್ ಡಾ. ಜೆ. ಕೇದಾರೇಶ್ವರಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ತುಕಾರಾಮ್ ಪೂಜಾರಿಯವರು ಸ್ವಾಗತಿಸಿದರು; ಡಾ. ಆಶಾಲತಾ ಸುವರ್ಣ ಪ್ರಸ್ತಾವನೆ ಮಾಡಿದರು. ಡಾ. ಸಾಯಿಗೀತಾ ವಂದನಾರ್ಪಣೆ ಮಾಡಿದರು. ಕು. ಸಿಂಧೂರ ಟಿ ಪಿ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿಚಾರಗೋಷ್ಠಿಗಳೆರಡು ನಡೆದವು:

ಬದಲಾವಣೆಯ ಸನ್ನಿವೇಶದಲ್ಲಿ ವಸ್ತುಸಂಗ್ರಹಾಲಯಗಳು. ಸಂಪನ್ಮೂಲ ವ್ಯಕ್ತಿ – ಡಾ. ಕೇದಾರೇಶ್ವರಿ, ಕ್ಯುರೇಟರ್, ಸಾಲಾರ್‍ಜಂಗ್ ಮ್ಯೂಸಿಯಂ ಹೈದರಾಬಾದ್. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ಕುಮಾರಸ್ವಾಮಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಡಾ. ಸಾಯಿಗೀತಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಭೌತಿಕ ಸಂಸ್ಕೃತಿ ಮತ್ತು ಇತಿಹಾಸ- ಮುಖಾಮುಖಿ. ಸಂಪನ್ಮೂಲ ವ್ಯಕ್ತಿ: ಪೆÇ್ರ. ರಾಜಾರಾಮ್ ಹೆಗಡೆ, ಇತಿಹಾಸ ಮತ್ತು ಪುರಾತತ್ವ ವಿಭಾಗ ಮುಖ್ಯಸ್ಥರು, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ. ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಚೇತನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿನಿಧಿಗಳಿಂದ ಪ್ರಬಂಧ ಮಂಡನೆಯ ಎರಡು ಗೋಷ್ಠಿಗಳನ್ನು ನಡೆಸಲಾಯಿತು; ಇವುಗಳ ಅಧ್ಯಕ್ಷತೆಯನ್ನು ಕ್ರಮವಾಗಿ ಡಾ. ಅಜಕ್ಕಳ ಗಿರೀಶ್ ಭಟ್ ಹಾಗೂ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಿದ್ದರು.


Spread the love