ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾ ಸಮಾವೇಶದ ಪೂರ್ವಭಾವಿ ಸಭೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯು ಇಂದು ಮಂಗಳೂರು ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ಯುವ ಸಮಾವೇಶದ ನಡೆಸುವ ಬಗ್ಗೆ ತಿರ್ಮಾನ ಮಾಡಲಾಯಿತು.


ಮುಂದೆ ನಡೆಯುವ ಚುನಾವಣೆಯಲ್ಲಿ ಹೇಗೆ ಯುವಕರು ಪಾಲ್ಗೊಳ್ಳಬೇಕು ಪಕ್ಷವನ್ನು ಹೇಗೆ ಸಂಘಟಿಸಬೇಕು ಹಾಗೂ ಮುಂಬರುವ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಸರ್ಕಾರವನ್ನು ರಚಿಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಯುವಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರು ತಿಳಿಸಿದರು
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲಾ ಪದಾಧಿಕಾರಿಗಳು ಹಾಗೂ ಕ್ಷೇತ್ರದ ಅಧ್ಯಕ್ಷರುಗಳ ನೇಮಕಾತಿ ಮಾಡಲಾಯಿತು
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಿಶೋರ್ ಶೆಟ್ಟಿ ಅರಸಿನ ಮಕ್ಕಿ,ಸೈಯದ್, ಸುರತ್ಕಲ್ ಬ್ಲಾಕ್ ಅಧ್ಯಕ್ಷ ರತೀಶ್ ಕರ್ಕೇರ , ಜಿಲ್ಲಾ ನಾಯಕರುಗಳಾದ ಮಹ್ಮದ್ ರಜಾಕ್, ಭರತ್ ಹೆಗ್ಡೆ, ಫೈಸಲ್, ಮಹಮ್ಮದ್ ಆಸೀಫ್, ಶಿವು ಸಲ್ಯಾನ್, ಸತ್ತಾರು ಬಂದರು, ಸೂರಜ್, ಕಲಂದರ್, ಫೈಯೋಜ್ ಉಳ್ಳಾಲ, ಹಿತೇಶ್ ರೈ, ಸಿನಾನ್, ಹಾಜಿಕ್ ಇನ್ನು ಅನೇಕ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು













