ದೇವೋಜಿ ರಾವ್ ಹೃದಯಾಘಾತದಿಂದ ತಮ್ಮ ಸ್ವ ಗೃಹದಲ್ಲಿ ನಿಧನರಾದರು

Spread the love

ದೇವೋಜಿ ರಾವ್ 56 ವರ್ಷ ಇಂದು ಹೃದಯಾಘಾತದಿಂದ ತಮ್ಮ ಸ್ವ ಗೃಹದಲ್ಲಿ ನಿಧನರಾದರು

ಇವರು ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ದಕ್ಷಿಣ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಯ ಯಾನೆ ಮರಾಠ ಕ್ಷತ್ರೀಯ ಸಂಘ ಮಂಗಳೂರು ಮತ್ತು ಕಾಸರಗೋಡಿನ ಅಧ್ಯಕ್ಷರಾಗಿದ್ದರು. ಜಲ್ಲಿಗುಡ್ಡೆ ಅಂಬಾಭವಾನಿ ಭಜನಾ ಮಂಡಳಿಯ ಸ್ಥಾಪಕ ಅಧ್ಯಕ್ಷರಾಗಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ, ಪ್ರಸ್ತುತ ಮಂಗಳೂರಿನ ಟ್ರಾವೆಲ್ ಏಜೆನ್ಸಿಯಾದ ಮೂಕಾಂಬಿಕಾ ಎಂಟರ್ ಪ್ರೈಸಸ್ ನ ಮಾಲಕರಾಗಿದ್ದರು. ಮೃತರು, ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಸಂಸದರಾದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಜಿಲ್ಲಾಧ್ಯಕ್ಷರಾದ ಶಾಸಕ ಸಂಜೀವ ಮಠಂದೂರು, ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಾಸಕ ಉಮಾನಾಥ್ ಕೋಟ್ಯಾನ್, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಕಿಶೋರ್ ರೈ, ಸುದರ್ಶನ್, ಕ್ಯಾ.ಬ್ರಿಜೇಶ್ ಚೌಟ, ಸಂಜಯ್ ಪ್ರಭು, ಭಾಸ್ಕರ್ ಚಂದ್ರಶೆಟ್ಟಿ, ರಮೇಶ್ ಕಂಡೆಟ್ಟು, ವಸಂತ್ ಜೆ.ಪೂಜಾರಿ, ಕಾರ್ಪೋರೇಟರ್ ಗಳಾದ ಪ್ರೇಮಾನಂದ ಶೆಟ್ಟಿ ಸುಧೀರ್ ಶೆಟ್ಟಿ ಕಣ್ಣೂರು, ಸುರೇಂದ್ರ, ವಿಜಯ್ ಕುಮಾರ್ ಶೆಟ್ಟಿ, ನವೀನ್ ಚಂದ್ರ, ಮತ್ತು ಪಕ್ಷದ ಇತರ ಮುಖಂಡರು ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು


Spread the love