ನಂತೂರು – ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಕಾರಿನ ಗಾಜು ಪುಡಿ – ಚಾಲಕನ ಮೇಲೆ ಪ್ರಕರಣ ದಾಖಲು

Spread the love

ನಂತೂರು – ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಕಾರಿನ ಗಾಜು ಪುಡಿ – ಚಾಲಕನ ಮೇಲೆ ಪ್ರಕರಣ ದಾಖಲು

ಮಂಗಳೂರು: ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಕಾರನ್ನು ನಿಲ್ಲಿಸದೇ ಮುಂದೆ ತೆರಳಿದ್ದ ಚಾಲಕನ ಮೇಲೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಂತೂರು ಜಂಕ್ಷನ್‌ನಲ್ಲಿ ಅಕ್ಟೋಬರ್ 2ರಂದು ರಾತ್ರಿ ಕದ್ರಿ ಸಂಚಾರ ಠಾಣೆ ಪೊಲೀಸರು ಗಸ್ತಿನಲ್ಲಿರುವಾಗ ಕಾರೊಂದು ಬಂದಿದ್ದು, ಚಾಲಕ ಮೇಲೆ ಅನುಮಾನ ಬಂದು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಚಾಲಕ ಶಿವಪ್ರಸನ್ನ ಎಂಬಾತ ಪೊಲೀಸರ ಸೂಚನೆ ಹೊರತಾಗಿಯೂ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದನು. ಈ ವೇಳೆ ಪೊಲೀಸ್‌ ಕಾನ್‌ಸ್ಟೆಬಲ್‌ ಕಾರನ್ನು ತಡೆಯಲು ಯತ್ನಿಸಿದರು. ಕಾರಿನ ಹಿಂಭಾಗಕ್ಕೆ ಪೊಲೀಸ್‌ ಕಾನ್ಸ್ ಸ್ಟೆಬಲ್‌ ತನ್ನ ಮೊಬೈಲ್‌ನಿಂದ ಬಡಿದಿದ್ದು, ಇದರಿಂದ ಕಾರಿನ ಗಾಜು ಒಡೆದಿದೆ.

ಚಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಆತ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಮುಂದಿನ ಕ್ರಮಕ್ಕಾಗಿ ಚಾಲಕನಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.ಅಲ್ಲದೆ ಚಾಲಕ ಶಿವ ಪ್ರಸನ್ನ ವಿನಾಯಕ ಬಾಳಿಗಾ ಕೊಲೆಪ್ರಕರಣದ ಆರೋಪಿ ಮತ್ತು ರೌಡಿ ಶೀಟರ್ ಆಗಿದ್ದಾನೆ ಎಂದು ತಿಳಿಸಿದ್ದಾರೆ.


Spread the love