ನಾವುಂದ: ಕಾಲೇಜು ದಾಖಲಾತಿಗೆ ಬಂದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ದುರ್ಮರಣ

Spread the love

ನಾವುಂದ: ಕಾಲೇಜು ದಾಖಲಾತಿಗೆ ಬಂದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ದುರ್ಮರಣ

ಕುಂದಾಪುರ : ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ಸರಕು ತುಂಬಿದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮರವಂತೆಯ ನಿವಾಸಿ ಕಿಶನ್ ಖಾರ್ವಿ(17) ಎಂದು ಗುರುತಿಸಲಾಗಿದೆ.

ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕಿಶನ್ ದ್ವಿತೀಯ ವರ್ಷದ ದಾಖಲಾತಿಗಾಗಿ ಕಾಲೇಜಿಗೆ ಬಂದು ಹಿಂತಿರುಗುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.

ಸ್ಥಳಕ್ಕೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ನಾಯಕ್, ಪಿಎಸ್ಐ ಸಂಗೀತ ಭೇಟಿ ನೀಡಿದ್ದಾರೆ.

ಗಂಗೊಳ್ಳಿ ಆಪತ್ಭಾಂದವ ಆಂಬುಲೆನ್ಸ್ ಮೂಲಕ ಶವವನ್ನು ಬೈಂದೂರು ಶವಾಗಾರಕ್ಕೆ ರವಾನಿಸಲಾಗಿದೆ.


Spread the love