ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಂತೈಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ

ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಂತೈಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ

ಮಂಗಳೂರು: ತೀವ್ರ ನೆರೆಯಿಂದ ತತ್ತರಿಸಿದ ಬೆಳ್ತಂಗಡಿ ತಾಲೂಕಿನ ಪ್ರದೇಶಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಲೋಕಸಭಾ ಆಭ್ಯರ್ಥಿಯಾದ ಮಿಥುನ್ ರೈ ಮಂಗಳವಾರ ಭೇಟಿ ನೀಡಿದರು.

ನೆರೆಯಿಂದ ಸಂಕಷ್ಟಕ್ಕೆ ಒಳಗಾದ ಬೆಳ್ತಂಗಡಿ ತಾಲೂಕಿನ ಲೈಲಾ,ಇಂದಬೆಟ್ಟು,ಕಿಲ್ಲೂರು ಶಾಲೆ ,ಮಕ್ಕಿ ಹಾಗೂ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದ ಮಿಥುನ್ ರೈ ಸಂತ್ರಸ್ತರನ್ನು ಸಂತೈಸಿದರು.

ಜೊತೆಗೆ ತನ್ನ ಸ್ವಂತ ಖರ್ಚಿನಲ್ಲಿ ದಿನ ನೀತ್ಯ ಅಗತ್ಯ ವಸ್ತುಗಳನ್ನು ಎರಡು ದಿನಗಳಲ್ಲಿ ಪೂರೈಸುವುದಾಗಿ ಭರವಸೆಗಳನ್ನು ನೀಡಿ ಅಧಿಕಾರಿಗಳಿಂದ ಅಗತ್ಯವಸ್ತುಗಳ ಪಟ್ಟಿಯನ್ನು ಪಡೆದುಕೊಂಡರು.