ನೆರೆ ಸಂತ್ರಸ್ತರಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ನೆರವು
ಉಡುಪಿ: ಭೀಕರ ನೆರೆಯಿಂದ ತತ್ತರಿಸಿರುವ ಕೊಡಗು ಮತ್ತು ಕೇರಳದ ವಿವಿಧ ಪ್ರದೇಶಗಳ ಜನರಿಗೆ ಸಹಾಯಹಸ್ತ ನೀಡುವ ಸಲುವಾಗಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ವಿವಿಧ ಘಟಕಗಳ ಮೂಲಕ ಸಂಗ್ರಹಿಸಲಾದ ಅಗತ್ಯ ಸಾಮಗ್ರಿಗಳನ್ನು ಸೋಮವಾರ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ನೆರೆ ಪರಿಹಾರ ಸಂಗ್ರಹ ಕಾರ್ಯಕ್ರಮಕ್ಕೆ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದಿಂದ ಉತ್ತಮ ಸ್ಪಂದನೆ ದೊರೆತಿದ್ದು ಸುಮಾರು 1 ಟ್ರಕ್ ವಿವಿಧ ದಿನಬಳಕೆ ವಸ್ತುಗಳ ಸಂಗ್ರಹವಾಗಿವೆ. ಧರ್ಮಪ್ರಾಂತ್ಯದ ವಿವಿಧ ಘಟಕಗಳು ಎಡೆಬಿಡದೆ ದಿನಸಿ ಸಾಮಗ್ರಿ, ಬಟ್ಟೆ ಬರೆ, ಅಕ್ಕಿ, ಹಣವನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಸಂಗ್ರಹಗೊಂಡ ಸಲಕರಣೆಗಳನ್ನು ಸೋಮವಾರ ಟ್ರಕ್ ಮೂಲಕ ತಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸಂಗ್ರಹಗೊಂಡ ಎಲ್ಲಾ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸಲು ಕ್ರಮ ಕೈಗೊಳ್ಳ ಲಾಗುವುದು. ಕೆಥೊಲಿಕ್ ಸಭಾ ಆಯೋಜಿಸಿರುವ ಈ ಕಾರ್ಯಕ್ಕೆ ವಿವಿಧ ಘಟಕಗಳು ಸಕಾಲಿಕ ನೆರವು ನೀಡಿರುವುದಕ್ಕೆ ಕಾರ್ಯಕ್ರಮ ಸಂಘಟಕ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಅಭಿನಂದನೆ ಸಲ್ಲಿಸಿದ್ದಾರೆ.













