ನೇರಳಕಟ್ಟೆ: ಲಾರಿ – ಆಂಬುಲೆನ್ಸ್ ನಡುವೆ ಅಪಘಾತ; ಮಹಿಳೆ ಮೃತ್ಯು

ನೇರಳಕಟ್ಟೆ: ಲಾರಿ – ಆಂಬುಲೆನ್ಸ್ ನಡುವೆ ಅಪಘಾತ; ಮಹಿಳೆ ಮೃತ್ಯು

ಬಂಟ್ವಾಳ : ಟಿಪ್ಪರ್ ಲಾರಿ ಹಾಗೂ ಆಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿ ಮಹಿಳೆಯೋರ್ವರು ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಮಿತ್ತೂರು ನಿವಾಸಿ ವಾಮನ ನಾಯ್ಕ ಎಂಬವರ ಪತ್ನಿ ಪಾರ್ವತಿ ಎಂದು ಗುರುತಿಸಲಾಗಿದೆ.

ರೋಗಿಯೊಬ್ಬರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆ ಯಿಂದ ಮಂಗಳೂರಿಗೆ ತರುತ್ತಿದ್ದ ವೇಳೆ ಪುತ್ತೂರಿನಿಂದ ಹೋಗುತ್ತಿದ್ದ ಲಾರಿಯು ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಅಪಘಾತ ಸಂಭವಿಸಿದೆ. ಅಫಘಾತದಿಂದ ಅಂಬುಲೆನ್ಸ್ ಕಮರಿಗೆ ಬಿದ್ದಿದ್ದು, ರೋಗಿ ವಾಮನ ನಾಯ್ಕ ಅವರ ಪತ್ನಿ ಪಾರ್ವತಿ ಸ್ಥಳದಲ್ಲೇ ಮೃತಪಟ್ಟು ರೋಗಿ ವಾಮನ ನಾಯ್ಕ ಅವರ ಮಗಳು, ಸಹೋದರ ಲೋಕಯ್ಯ, ಅಳಿಯ ಹಾಗೂ ಇನ್ನೋರ್ವರಿಗೆ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.